ಕರ್ನಾಟಕ

karnataka

ETV Bharat / state

ತುಮಕೂರು : 12 ವರ್ಷದ ಬಾಲಕಿ ಮೇಲೆ 65 ವರ್ಷದ ಮುದುಕನಿಂದ ಅತ್ಯಾಚಾರ - ಬಾಲಕಿ ಮೇಲೆ ಅತ್ಯಾಚಾರ

ಘಟನೆ ನಡೆದು ಮೂರು ದಿನಗಳ ನಂತರ ಬಾಲಕಿ ತನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ..

rape
rape

By

Published : Sep 4, 2021, 5:24 PM IST

ತುಮಕೂರು :ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕಾಮುಕ ವೃದ್ಧನೊಬ್ಬ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆ.23ರಂದು ಘಟನೆ ನಡೆದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಲಿಂಗಣ್ಣ(65) ಎಂಬಾತ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.

ಹೊಲದಲ್ಲಿದ್ದ ವೇಳೆ ಸಂಜೆಯಾಗುತ್ತಿದ್ದಂತೆ ಮನೆಗೆ ಹೋಗಿ ಟೀ ಮಾಡಿಕೊಂಡು ಬಾ ಎಂದು ಬಾಲಕಿಯನ್ನು ಪೋಷಕರು ಕಳುಹಿಸಿದ್ದರು. ಅದರಂತೆ ಬಾಲಕಿ ಮನೆಗೆ ಹೋಗುವಾಗ ಆಕೆಯನ್ನು ಹಿಂಬಾಲಿಸಿ, ಬಳಿಕ ಮನೆಗೆ ನುಗ್ಗಿ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಘಟನೆ ನಡೆದು ಮೂರು ದಿನಗಳ ನಂತರ ಬಾಲಕಿ ತನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದ್ದಾಳೆ. ಆ ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

(ಮೈಸೂರು ನರ್ಸಿಂಗ್ ವಿದ್ಯಾರ್ಥಿನಿ​ ಮೇಲಿನ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​)

ABOUT THE AUTHOR

...view details