ತುಮಕೂರು:ಮಂಗಳೂರು ಸ್ಫೋಟ ಪ್ರಕರಣದಲ್ಲಿ ನಕಲಿ ಆಧಾರ್ ಕಾರ್ಡ್ ಬಳಕೆಯಾಗಿದ್ದು, ಪ್ರೇಮ್ ರಾಜ್ ಹುಟಗಿ ಎಂಬ ವ್ಯಕ್ತಿಯ ಆಧಾರ್ ಕಾರ್ಡ್ ಬಳಕೆಯಾಗಿದೆ. ಮೂಲತಃ ಪ್ರೇಮ್ ರಾಜ್ ಹುಟಗಿ ಹುಬ್ಬಳ್ಳಿ ಮೂಲದ ವ್ಯಕ್ತಿಯಾಗಿದ್ದು, ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರೇಮ್ ರಾಜ್ ಎರಡು ಬಾರಿ ಆಧಾರ್ ಕಳೆದುಕೊಂಡಿದ್ದರು. 6 ತಿಂಗಳ ಹಿಂದೆ ಧಾರವಾಡ -ಹುಬ್ಬಳ್ಳಿಗೆ ಹೋಗುವ ವೇಳೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಿಂದ ಹಾವೇರಿಗೆ ಬರುವ ವೇಳೆಯೂ ಆಧಾರ್ ಕಳೆದುಕೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಧಾರವಾಡ ಹಾಗೂ ಹಾವೇರಿ ಪ್ರಯಾಣ ಮಾಡಿದ್ದರಂತೆ.
ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ: ಪ್ರೇಮ್ ರಾಜ್ ಕಳೆದ ಮೂರು ವರ್ಷದಿಂದ ತುಮಕೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಪ್ರೇಮ್ ರಾಜ್ ಕೆಲಸ ಮಾಡುತ್ತಿದ್ದಾರೆ. ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಬೆಳಗ್ಗೆ ಪ್ರೇಮ್ ರಾಜ್ಗೆ ಕರೆ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಅವರು ತುಮಕೂರು ಎಸ್ಪಿ ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಅಲೋಕ್ ಕುಮಾರ್ ಸೂಚನೆಯಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಭೇಟಿ ಮಾಡಿ ವಿಚಾರಣೆಗೆ ಒಳಗಾಗಿದ್ದಾರೆ.
ಸ್ಫೋಟಕ್ಕೂ ನನಗೂ ಸಂಬಂಧವಿಲ್ಲ:ಸ್ಫೋಟಕ್ಕೂ ನನಗೂ ಸಂಬಂಧವಿಲ್ಲಪೊಲೀಸರ ವಿಚಾರಣೆಗೆ ಸ್ಪಂದಿಸುತ್ತೇನೆ. ಪೊಲೀಸರು ನಮ್ಮ ಮನೆಗೆ ಬಂದು ವಿಚಾರಣೆ ಮಾಡಿದ್ದಾರೆ. ಪೊಲೀಸರು ಹೇಳುವವರೆಗೂ ನನಗೆ ಮಾಹಿತಿ ಇರಲಿಲ್ಲ. ಪೊಲೀಸರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ಪ್ರೇಮ್ ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ :ಆಧಾರ್ ಕಳೆದುಕೊಂಡಿದ್ದ ಹುಬ್ಬಳ್ಳಿಯ ಯುವಕ.. ಶಂಕಿತನ ಕೈಗೆ ಸಿಕ್ಕು ದುರುಪಯೋಗ: ಪೋಷಕರ ಸ್ಪಷ್ಟನೆ