ಕರ್ನಾಟಕ

karnataka

ETV Bharat / state

ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಅಮಾನತು - ಅಮಾನತು

ಚಿಕಿತ್ಸೆ ಸಿಗದೆ ಮಗು ಸಾವು ಪ್ರಕರಣ. ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಅಮಾನತು.

Tumkur
ಚಿಕಿತ್ಸೆ ಸಿಗದೆ ಮಗು ಸಾವು ಪ್ರಕರಣ

By

Published : Dec 4, 2022, 1:12 PM IST

ತುಮಕೂರು:ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹಿತ್.ಡಿ ಅವರನ್ನು ಅಮಾನತು ಮಾಡಲಾಗಿದೆ.

ಮಗುವನ್ನು ಚಿಕಿತ್ಸೆಗೆ ಕರೆ ತಂದ ವೇಳೆ ವೈದ್ಯರು ಕರ್ತವ್ಯದ ಅವಧಿಯಲ್ಲಿ ಇರದ ಕಾರಣ ಕರ್ತವ್ಯಲೋಪ ಆರೋಪದಡಿ ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ. ಜತೆಗೆ ಆ್ಯಂಬುಲೆನ್ಸ್ ಚಾಲಕ ಸೀನಪ್ಪ ಕರೆ ಸ್ವೀಕರಿಸದೆ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಆತನನ್ನೂ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಡಿಹೆಚ್‌ಒಗೆ ನೋಟಿಸ್‌: ಪ್ರಕರಣ ಸಂಬಂಧ ಡಿಹೆಚ್ಒ ಡಾ.ಮಂಜುನಾಥ್ ಅವರಿಗೂ ಆಯುಕ್ತರು ನೋಟಿಸ್ ಜಾರಿ ಮಾಡಿದ್ಧಾರೆ. ಘಟನೆಯ ಬಗ್ಗೆ ಮೂರು ದಿನಗಳೊಳಗೆ ಲಿಖಿತ ಹೇಳಿಕೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಏಕಪಕ್ಷೀಯವಾಗಿ ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ:ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಬಾಲಕ ಸಾವು.. ಹೆಚ್​ಡಿಕೆ ಎದುರು ಶವವಿಟ್ಟು ಪ್ರತಿಭಟನೆ

ABOUT THE AUTHOR

...view details