ಕರ್ನಾಟಕ

karnataka

ETV Bharat / state

ಏನ್ರೀ, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ವಾ? : ಜಿ. ಪರಮೇಶ್ವರ್ ಪ್ರಶ್ನೆ - ಜಿ ಪರಮೇಶ್ವರ್

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಮ್ಮ ಕೆಲಸಗಳು ಕಡಿಮೆ ಇದೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು, ರೆಸ್ಟ್ ಪಡೆಯಲಷ್ಟೇ ರೆಸಾರ್ಟ್​ಗೆ ತೆರಳಿದ್ದಾರೆ. ಎರಡು ಬಾರಿ ರೆಸಾರ್ಟ್​ಗೆ ಹೋಗಿದ್ದಾರೆ ಅನ್ನೋದನ್ನೇ ಮಾಧ್ಯಮದವರು ದೊಡ್ಡದಾಗಿ ಪ್ರಸ್ತಾಪಿಸುತ್ತಿದೆ ಎಂದರು.

ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್

By

Published : May 11, 2019, 12:54 PM IST

ತುಮಕೂರು:ನಾನೂ ಸಹ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಬೇಕು ಎಂದುಕೊಂಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ, ಸಿಎಂ ಪದೇಪದೆ ರೆಸಾರ್ಟ್​ಗೆ ಹೋಗುತ್ತಿದ್ದಾರೆ ಏಕೆ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಎಚ್‌ ಡಿ ಕುಮಾರಸ್ವಾಮಿ ಚುನಾವಣೆ ಪ್ರಚಾರದಲ್ಲಿ ಓಡಾಡಿ ದಣಿದಿದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್​ಗೆ ಹೋಗಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸುದ್ದಿಗೋಷ್ಠಿ

ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಮ್ಮ ಕೆಲಸಗಳು ಕಡಿಮೆ ಇದೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದು, ರೆಸ್ಟ್ ಪಡೆಯಲಷ್ಟೇ ರೆಸಾರ್ಟ್​ಗೆ ತೆರಳಿದ್ದಾರೆ. ಎರಡು ಬಾರಿ ರೆಸಾರ್ಟ್​ಗೆ ಹೋಗಿದ್ದಾರೆ ಅನ್ನೋದನ್ನೇ ಮಾಧ್ಯಮದವರು ದೊಡ್ಡದಾಗಿ ಪ್ರಸ್ತಾಪಿಸುತ್ತಿದ್ದೀರಿ ಎಂದ ಅವರು, ಒಂದೆರಡು ದಿನ ರೆಸ್ಟ್ ತಗೊಂಡ್ ಬರೋಕೂ ನೀವ್ ಬಿಡಲ್ಲಾ ಅಂದ್ರೇ ಹೆಂಗೆ ಎಂದರು. ಹಾಗೆಯೇ ನಾನೂ ಸಹ ವಿಶ್ರಾಂತಿಗೆ ತೆರಳುವ ಆಲೋಚನೆಯಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details