ತುಮಕೂರು: ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ನಗರದಲ್ಲಿ ಆಳ್ವಾಸ್ ನುಡಿಸಿರಿ ಆಯೋಜಿಸಿದ್ದ ವಿವಿಧ ನೃತ್ಯ ರೂಪಕ ಕಾರ್ಯಕ್ರಮದಲ್ಲಿ 300 ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.
ಮುಖ್ಯವಾಗಿ ನವರಾತ್ರಿಯ ಹಿನ್ನೆಲೆಯಲ್ಲಿ ಅಷ್ಟಲಕ್ಷ್ಮಿಯರ ನೃತ್ಯ ರೂಪಕ ಅದ್ಭುತವಾಗಿ ಮೂಡಿಬಂದಿತು. ವಿದ್ಯಾರ್ಥಿನಿಯರು ಸುಮಾರು 10 ನಿಮಿಷಗಳ ಕಾಲ ಸಂಗೀತ ಮತ್ತು ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಸಾಂಸ್ಕೃತಿಕ ವೈಭವ ಎತ್ತಿಹಿಡಿದರು. ಜೊತೆಗೆ ರಾಮಾಯಣದಲ್ಲಿ ಬರುವ ಸೀತಾಪಹರಣದ ಪ್ರಸಂಗವನ್ನು ನೆರೆದಿದ್ದವರಿಗೆ ನೃತ್ಯ ರೂಪಕದ ಮೂಲಕ ಪ್ರಸ್ತುತ ಪಡಿಸಿ ಮೆಚ್ಚುಗೆಗೆ ಪಾತ್ರರಾದರು.