ತುಮಕೂರು:ದೇಶದಲ್ಲಿರುವ ಕಾನೂನು, ನೀತಿ ನಿಯಮಗಳು, ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿವೆ. ಇವುಗಳೆಲ್ಲವನ್ನು ಬದಲಾಯಿಸಬೇಕು ಎಂದು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.
ದೇಶದ ಆರ್ಥಿಕತೆ, ಪ್ರಜಾಪ್ರಭುತ್ವ ವ್ಯವಸ್ಥೆ ತುಕ್ಕು ಹಿಡಿದಿವೆ: ಮೀನಾಕ್ಷಿ ಸುಂದರಂ - ದೇಶದ ಆರ್ಥಿಕತೆ
ನಗರದ ಕನ್ನಡ ಭವನದಲ್ಲಿ ಸಿಐಟಿಯು 14ನೇ ರಾಜ್ಯದ ಸಮ್ಮೇಳನ ಹಾಗೂ ಸಿಐಟಿಯು 50ನೇ ವರ್ಷಾಚರಣೆಯ ನೆನಪಿಗಾಗಿ ಆಯೋಜಿಸಿದ್ದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಉದ್ಘಾಟಿಸಿದರು. ಬಳಿಕ ಮಾತನಾಡಿ ದೇಶದಲ್ಲಿರುವ ಕಾನೂನು ವ್ಯವಸ್ಥೆ, ನೀತಿ ನಿಯಮಗಳು, ಕಾರ್ಮಿಕರ ಸಮಸ್ಯೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಿಐಟಿಯು 14ನೇ ರಾಜ್ಯ ಸಮ್ಮೇಳನ ಹಾಗೂ ಸಿಐಟಿಯು 50ನೇ ವರ್ಷಾಚರಣೆಯ ನೆನಪಿಗಾಗಿ ಆಯೋಜಿಸಿದ್ದ ವಿಚಾರ ಸಂಕಿರ್ಣ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗೆಳೇ ಸವಾಲಾಗಿವೆ. ಭ್ರಷ್ಟಾಚಾರ ದೇಶವ್ಯಾಪಿ ಆವರಿಸಿಕೊಂಡಿದ್ದು, ಅದನ್ನು ಬದಲಾಯಿಸಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು ಕಾರ್ಮಿಕ ಕಾನೂನು ಒಳಗೊಂಡಿದೆ ಎಂದರು.
ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಬಂದಂತಹ ಕಾನೂನುಗಳು ಅಂದಿನ ಸಮಾಜದ ಅಗತ್ಯಕ್ಕೆ ತಕ್ಕಂತೆ ಇದ್ದವು. ಆದರೆ ಇಂದಿನ ಸಮಾಜ ಅಂದಿನ ರೀತಿಯಲ್ಲಿ ಇಲ್ಲ. ಹಾಗಾಗಿ ಇಂದಿನ ಸಮಾಜಕ್ಕೆ ತಕ್ಕಂತೆ ಕಾನೂನುಗಳು ಬದಲಾಗಬೇಕು ಎಂದು ಮೀನಾಕ್ಷಿ ಸುಂದರಂ ಒತ್ತಾಯಿಸಿದರು.