ತುಮಕೂರು:ಪೊಲೀಸರೆಂದು ನಂಬಿಸಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕದ್ದು ಯಾಮಾರಿಸಿ ಪರಾರಿಯಾಗಿರುವ ಘಟನೆ ಪಾವಗಡದ ಮಾರುತಿ ಚಿತ್ರಮಂದಿರದ ಬಳಿ ನಡೆದಿದೆ.
ನಕಲಿ ಪೊಲೀಸರಿಂದ ಮಹಿಳೆಯ ಮಾಂಗಲ್ಯ ಸರ ಅಪಹರಣ
ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು, ನಾವು ಪೊಲೀಸರೆಂದು ನಂಬಿಸಿ ಮಾಂಗಲ್ಯ ಸರವನ್ನು ಈ ರೀತಿ ಕೋರಳಲ್ಲಿ ಹಾಕಿಕೊಂಡು ತೆರಳಿದರೆ ಕದಿಯುತ್ತಾರೆ. ಒಂದು ಕವರ್ನಲ್ಲಿ ಹಾಕಿ ಕೋಡುತ್ತೆವೆಂದು ನಂಬಿಸಿ ಕವರ್ನಲ್ಲಿ ಇಟ್ಟ ರೀತಿ ನಾಟಕವಾಡಿದ್ದಾರೆ.
ಪಾವಗಡ ಪಟ್ಟಣದ ವಿನಾಯಕ ನಗರದ ವಿಜಯಮ್ಮ ಮೋಸ ಹೋದವರಾಗಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರು, ತಾವು ಪೊಲೀಸರೆಂದು ನಂಬಿಸಿ ಮಾಂಗಲ್ಯ ಸರವನ್ನು ಈ ರೀತಿ ಕೋರಳಲ್ಲಿ ಹಾಕಿಕೊಂಡು ತೆರಳಿದರೆ ಕದಿಯುತ್ತಾರೆ. ಒಂದು ಕವರ್ನಲ್ಲಿ ಹಾಕಿ ಕೋಡುತ್ತೆವೆಂದು ನಂಬಿಸಿ ಕವರ್ನಲ್ಲಿ ಇಟ್ಟ ರೀತಿ ನಾಟಕವಾಡಿದ್ದಾರೆ.
ವಿಜಯಮ್ಮ ಮನೆಗೆ ಹೋಗಿ ಕವರ್ ತೆರೆದು ನೋಡಿದ್ರೆ ಕಲ್ಲು ಇರುವುದು ಪತ್ತೆಯಾಗಿದೆ. ಇದೇ ರೀತಿ ಪದೇ ಪದೆ ಪಾವಗಡ ಪಟ್ಟಣದಲ್ಲಿ ಪೊಲೀಸರೆಂದು ನಂಬಿಸಿ ಅಮಾಯಕ ಮಹಿಳೆಯರ ಕೋರಳಲ್ಲಿದ್ದ ಚಿನ್ನದ ಸರವನ್ನು ಎಗರಿಸಲಾಗುತ್ತಿದೆ. ಇಂತಹ ನಕಲಿ ಪೊಲೀಸರನ್ನು ಮಟ್ಟಹಾಕುವ ಮೂಲಕ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.