ತುಮಕೂರು: ನಗರದ ಮಧುಗಿರಿಯಲ್ಲಿ ಇರುವ ಎಆರ್‌ಟಿಒ ಕಚೇರಿಯ ಒಳಭಾಗದಲ್ಲಿ ಮೇಲ್ಛಾವಣಿ ಕುಸಿದು ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಎಆರ್‌ಟಿಒ ಕಚೇರಿಯ ಮೇಲ್ಛಾವಣಿ ಕುಸಿತ ಸಿಬ್ಬಂದಿಗೆ ಗಾಯ - kannada news
ಎಆರ್‌ಟಿಒ ಕಟ್ಟಡ ಕುಸಿದು ಇಬ್ಬರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎ.ಆರ್.ಟಿ.ಓ ಕಟ್ಟಡ ಕುಸಿದು ಇಬ್ಬರು ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ
ನಗರದ ಮಧುಗಿರಿಯಲ್ಲಿರುವ ಎಆರ್‌ಟಿಒ ಕಚೇರಿಯ ಒಳ ಭಾಗದ ಮೇಲ್ಛಾವಣಿ ಕುಸಿದ ಪರಿಣಾಮ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಂಜಿನಪ್ಪ ಮತ್ತು ಲಕ್ಷ್ಮಣ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ಛಾವಣಿ ಕುಸಿದ ಪರಿಣಾಮ ಕಚೇರಿಯಲ್ಲಿದ್ದ ಕಂಪ್ಯೂಟರ್ ಹಾಗೂ ಚೇರ್ ಹಾಗೂ ಟೇಬಲ್‌ಗಳಿಗೆ ಹಾನಿಯಾಗಿದೆ. ಎಆರ್‌ಟಿಒ ಇಲಾಖೆಯವರು ಕಟ್ಟಡ ರಿಪೇರಿ ಮಾಡಿಸಲು ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೂ ಕಟ್ಟಡದ ರಿಪೇರಿಗೆ ಮುಂದಾಗದಿರುವುದೇ ಇದಕ್ಕೆ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.