ತುಮಕೂರು: ಕಾಂಗ್ರೆಸ್ ಪಕ್ಷವೇ ಅಶ್ಲೀಲ, ಹಿಂದೂ ಪದ ಅಶ್ಲೀಲವಲ್ಲ. ಇಷ್ಟು ದಿನ ಕಾಂಗ್ರೆಸ್ಸಿಗರು ಹಿಂದೂಗಳನ್ನು ಅವಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರದ ಕುರ್ಚಿ ಮೇಲೆ ಕುಳಿತಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.
ತುಮಕೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಇಡೀ ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಿದೆ. ಕಾಂಗ್ರೆಸ್ ಪಕ್ಷವೇ ಅಶ್ಲೀಲ ಎಂದು. ಹಾಗಾಗಿ, ಮತದಾರರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಇದನ್ನೂ ಓದಿ:ಹಿಂದುಳಿದ ವರ್ಗದ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಭೈರತಿ ಬಸವರಾಜ್
5 ತಿಂಗಳಲ್ಲಿ ಚುನಾವಣೆ ಇದೆ. ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಇಂತಹ ವಿವಾದ ಸೃಷ್ಟಿಸುತ್ತಿದೆ. ಡಿ ಕೆ ಶಿವಕುಮಾರ್ಗೆ ತಾಕತ್ತು ಇದ್ದರೆ ಇಂದೇ ಸತೀಶ್ ಜಾರಕಿಹೊಳಿಯನ್ನು ಪಕ್ಷದಿಂದ ಹೊರಹಾಕಲಿ. ಮಗು ಚಿವುಟುವುದು, ತೊಟ್ಟಿಲು ತೂಗುವುದು ಎರಡೂ ಕೆಲಸವನ್ನು ಡಿ ಕೆ ಶಿವಕುಮಾರ್ ಮಾಡಬಾರದು. ಹಿಂದೂ - ಮುಸ್ಲಿಂ ಇಬ್ಬರೂ ಒಟ್ಟಿಗೆ ಸೇರಿ ಮುಂದೆ ಹೋಗೋದಕ್ಕೆ ಇವರು ಬಿಡ್ತಿಲ್ಲ ಎಂದು ಆರೋಪಿಸಿದ ಅವರು, ಈ ಹಿಂದೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷ ಅಮಾನತು ಮಾಡಿತ್ತು. ಅದೇ ರೀತಿ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳುವ ಧೈರ್ಯವನ್ನು ಕಾಂಗ್ರೆಸ್ ತೋರಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಹಿಂದೂ ಶಬ್ಧ ಅಶ್ಲೀಲ ಎಂಬ ಹೇಳಿಕೆ ಧರ್ಮಕ್ಕೆ ಮಾಡಿದ ಅವಮಾನ: ಶಾಸಕ ರೇಣುಕಾಚಾರ್ಯ ಗರಂ
ಬಾಣಂತಿ ಮತ್ತು ಮಗು ಸಾವಿನ ಕುರಿತಂತೆ ಸ್ಟಾಫ್ ಜೊತೆ ಚರ್ಚೆ ನಡೆಸಿದ್ದೇನೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ತನಿಖೆ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಹಲವಾರು ಕೊರತೆಗಳಿವೆ, ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಬಂದಂತಹ ರೋಗಿಗಳಿಗೆ ಪ್ರೀತಿಯಿಂದ ಹಾಗೂ ಉಚಿತವಾಗಿ ಚಿಕಿತ್ಸೆ ಕೊಟ್ಟರೆ ಮಾತ್ರ ಅದು ಸರ್ಕಾರಿ ಆಸ್ಪತ್ರೆ ಆಗುತ್ತೆ. ಇಲ್ಲಾಂದ್ರೆ, ಅದು ನರ್ಸಿಂಗ್ ಹೋಮ್ ಆಗುತ್ತದೆ. ಸರಿಯಾಗಿ ಕೆಲಸ ಮಾಡುವಂತೆ ವೈದ್ಯರಿಗೆ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದೇನೆ. ಔಷಧಿಗೆ ಚೀಟಿಯನ್ನು ಹೊರಗಡೆ ಬರೆದು ಕೊಡಬಾರದು, ಆಸ್ಪತ್ರೆ ಒಳಗಡೆಯೇ ಕೊಡ್ಬೇಕು ಎಂದರು.