ಹಿರಿಯೂರು:ವೇಗವಾಗಿ ಬಂದ ವಾಹನವೊಂದು ದಿವ್ಯಾಂಗ ವ್ಯಕ್ತಿ ಚಲಿಸುತ್ತಿದ್ದ ಮೂರು ಗಾಲಿಯ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ನಡೆದಿದೆ.
ವಿಶೇಷಚೇತನ ವ್ಯಕ್ತಿ ಸಿದ್ದಯ್ಯ ಅಪಘಾತದಲ್ಲಿ ಗಾಯಗೊಂಡವರು.

ಸಿದ್ದಯ್ಯ ಕಳೆದ ರಾತ್ರಿ ಗುಳಗೊಂಡನಹಳ್ಳಿಗೆ ತೆರಳಿದ್ದು, ವಾಪಾಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ನಿಯಂತ್ರಣ ತಪ್ಪಿದ ಮೂರು ಗಾಲಿಯ ಬೈಕ್ ಹಳ್ಳಕ್ಕೆ ಬಿದ್ದ ಕಾರಣ ಸಿದ್ದಯ್ಯ ತಲೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಗಾಯಾಳುವನ್ನು 108 ಆಂಬ್ಯುಲೆನ್ಸ್ ಮೂಲಕ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.