ಕರ್ನಾಟಕ

karnataka

ETV Bharat / state

Bear attack: ಪಾವಗಡದಲ್ಲಿ ರೈತನ ಮೇಲೆ ಕರಡಿ ದಾಳಿ.. ತೀವ್ರ ಗಾಯಗೊಂಡ ರೈತ ಆಸ್ಪತ್ರೆಗೆ ದಾಖಲು - ಅರಣ್ಯ ಇಲಾಖೆ

ಪ್ರತಾಪ ರೆಡ್ಡಿ ಎಂಬ ರೈತ ತಮ್ಮ ಜಮೀನಿಗೆ ತೆರಳುವ ವೇಳೆ ಅವರ ಮೇಲೆ ಕರಡಿ ದಾಳಿ ಮಾಡಿದೆ.

Bear attack
ಕರಡಿ ದಾಳಿ

By

Published : Jul 13, 2023, 1:11 PM IST

ತುಮಕೂರು: ಕರಡಿ ದಾಳಿ ಮಾಡಿದ ಪರಿಣಾಮ ರೈತನಿಗೆ ತೀವ್ರ ಗಾಯವಾಗಿರುವ ಘಟನೆ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಾಪ ರೆಡ್ಡಿ (45) ಎಂಬುವರು ಕರಡಿ ದಾಳಿಗೊಳಗಾದ ರೈತ. ಪ್ರತಾಪ ರೆಡ್ಡಿ ತಮ್ಮ ಜಮೀನಿಗೆ ತೆರಳುತ್ತಿದ್ದಾಗ ಏಕಾಏಕಿ ಕರಡಿ ದಾಳಿ ಮಾಡಿದೆ. ತಲೆ‌ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಪ್ರತಾಪ ರೆಡ್ಡಿ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳುವನ್ನು ಭೇಟಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹಾಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಪಾವಗಡ ತಾಲೂಕಿನಲ್ಲಿ ಮನುಷ್ಯರ ಮೇಲೆ ಕರಡಿ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಆದರೂ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ದಾಳಿಗೆ ಮೇಕೆಗಳ ಸಾವು:ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಾರಿಪಾಳ್ಯ ಗ್ರಾಮದ ಬಳಿ ನಿರಂತರವಾಗಿ ಹಾಡಹಗಲೇ ದಾಳಿ ಮಾಡುತ್ತಿರುವ ಚಿರತೆಯು ಮೇಕೆಗಳನ್ನು ಕೊಂದು ಹಾಕುತ್ತಿದೆ. ಕುರಿ, ಮೇಕೆ ಮೇಯಿಸಲು ಹೋದಾಗ ಚಿರತೆ ದಾಳಿ ಮಾಡಿದೆ. ಈ ಚಿರತೆಯನ್ನು ಸೆರೆ ಹಿಡಯಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮನವಿ ಮಾಡಿದರೂ ಅರಣ್ಯ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವೃದ್ಧೆ ಮೇಲೆ ಚಿರತೆ ದಾಳಿ:ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಗುಡಿಸಲಿನಲ್ಲಿ ಮಲಗಿದ್ದ ವೃದ್ಧೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಇತ್ತೀಚೆಗೆ ಲಖನೌನ ದದ್ವರ್​ ಬಫರ್​ ವಲಯದ ದೌರಾಹ್ರಾ ಅರಣ್ಯ ಪ್ರದೇಶದಲ್ಲಿ ನಡೆದಿತ್ತು. ದೌರಾಹ್ರಾ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಚಿರತೆ ದಾಳಿಗಳು ಹೆಚ್ಚಾಗುತ್ತಿವೆ. ತೋಟದಲ್ಲಿ ಕೆಲಸ ಮುಗಿಸಿ ಅಲ್ಲೇ ಇದ್ದ ಗುಡಿಸಲಿನಲ್ಲಿ ವಿಶ್ರಾಂತಿಗಾಗಿ ವೃದ್ಧೆ ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿತ್ತು. ಚಿರತೆ ವೃದ್ಧೆಯ ಕುತ್ತಿಗೆ ಹಿಡಿದಿದ್ದರಿಂದ ಅವರು ಒದ್ದಾಡಿದ್ದರು. ಪಕ್ಕದಲ್ಲೇ ಇದ್ದ ಪುತ್ರ ಸಹಾಯಕ್ಕಾಗಿ ಕೂಗಿದ್ದರು. ನೆರೆಹೊರೆಯವರು ತಕ್ಷಣವೇ ಓಡಿ ಬಂದಾಗ ಚಿರತೆ ವೃದ್ಧೆಯನ್ನು ಬಿಟ್ಟು ಪರಾರಿಯಾಗಿತ್ತು. ಆದರೆ ಚಿರತೆ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದ ಕಾರಣ ವೃದ್ಧೆ ಸ್ಥಳದಲ್ಲೇ ಉಸಿರುಗಟ್ಟಿ ಸಾವನಪ್ಪಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಚಿರತೆಗಳ ದಾಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಇದನ್ನೂ ಓದಿ:Leopard in Tumkur: ಒಂದೇ ಕಡೆ ಏಕಾಏಕಿ ಮೂರು ಚಿರತೆಗಳು ಪ್ರತ್ಯಕ್ಷ.. ಬೆಚ್ಚಿ ಬಿದ್ದ ತುಮಕೂರು ಮಂದಿ

ABOUT THE AUTHOR

...view details