ಕರ್ನಾಟಕ

karnataka

ETV Bharat / state

ಪಾವಗಡ ತಾಲೂಕಿನಲ್ಲಿ ಸರಣಿ ಕಳ್ಳತನ.. ತಡರಾತ್ರಿ 10 ಮನೆಗಳಿಗೆ ಕನ್ನ - robbery news

ತಡರಾತ್ರಿ ತಾಲೂಕಿನ ಕನ್ನಮೇಡಿಯಲ್ಲಿ ಕಳ್ಳರು 10 ಮನೆಗಳಿಗೆ ಕನ್ನ ಹಾಕಿದ್ದಾರೆ. ಸುಮಾರು 3 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾರೆ. ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

10 Houses robbed in Pavagada village last night
ತಡರಾತ್ರಿ 10 ಮನೆ ದೋಚಿದ ಕಳ್ಳರು

By

Published : Sep 22, 2020, 12:47 PM IST

ಪಾವಗಡ(ತುಮಕೂರು): ತಾಲೂಕಿನ ಕನ್ನಮೇಡಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಒಂದಲ್ಲ, ಎರಡಲ್ಲ.. ಬರೋಬ್ಬರಿ 10 ಮನೆಗಳಿಗೆ ಕನ್ನಹಾಕಿ ಪರಾರಿಯಾಗಿದ್ದಾರೆ.

ತಡರಾತ್ರಿ ನಡೆದಿರುವ ಕಳ್ಳತನದಿಂದಾಗಿ ಗ್ರಾಮದ ರೈತರು ಬೆಚ್ಚಿಬಿದ್ದಿದ್ದಾರೆ. ಕಳ್ಳತನದ ವೇಳೆ ಮೂರು ಲಕ್ಷ ನಗದು, ಚಿನ್ನಾಭರಣ ಕದ್ದೊಯ್ದಿದ್ದಾರೆ.

ತಡರಾತ್ರಿ 10 ಮನೆಗಳಿಗೆ ಕನ್ನ ಹಾಕಿದ ಖದೀಮರು

ಕಳೆದ ವಾರ ಇಲ್ಲಿನ ಪೋತಗಾನಹಳ್ಳಿ, ದೊಡ್ಡಹಳ್ಳಿ ಮತ್ತು ಲಿಂಗದಹಳ್ಳಿ ಗ್ರಾಮಗಳಲ್ಲೂ ಇದೇ ರೀತಿ ಸರಣಿ ಮನೆಗಳ್ಳತನ ನಡೆದಿತ್ತು. ಇದೀಗ ಮತ್ತೆ ಕಳ್ಳರು ಹತ್ತು ಮನೆಗಳಿಗೆ ಕನ್ನಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಮಧುಗಿರಿ ಡಿವೈಎಸ್​​ಪಿ ಪ್ರವೀಣ್ ಮತ್ತು ಪಾವಗಡ ಪೊಲೀಸ್ ಠಾಣೆ ಪಿಎಸ್​​​ಐ ನಾಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details