ಕರ್ನಾಟಕ

karnataka

ETV Bharat / state

ಕೋವಿಡ್ ದೃಢ: ಪರಸನಹಳ್ಳಿ ಗ್ರಾಮ ಸಂಪೂರ್ಣ ಸೀಲ್​​​​​​​​​​​ಡೌನ್ - Yadagiri district news

ಸುರಪುರ ತಾಲೂಕಿನ ಪರಸನಹಳ್ಳಿ ಗ್ರಾಮದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

Surapura parasahalli seal down
Surapura parasahalli seal down

By

Published : Jun 5, 2020, 4:07 PM IST

ಸುರಪುರ :ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಹಿನ್ನೆಲೆ ಗ್ರಾಮವನ್ನು ಸೀಲ್​​​​​​ಡೌನ್ ಮಾಡಲಾಗಿದೆ.

ಮಹಾರಾಷ್ಟ್ರದಿಂದ ತಾಳಿಕೋಟಿಗೆ ಆಗಮಿಸಿದ ಮಹಿಳೆ 14 ದಿನಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿದ್ದು,ಪರಸನಹಳ್ಳಿ ಗ್ರಾಮಕ್ಕೆ ಸಂಬಂಧಿಗಳ ಮನೆಗೆ ಆಗಮಿಸಿ ಒಂದು ವಾರ ಕಳೆದಿದ್ದಾರೆ. ಕ್ವಾರಂಟೈನ್ ಕೇಂದ್ರದಿಂದ ಬರುವಾಗ ಸೋಂಕಿನ ವರದಿ ಬಾರದಿದ್ದರೂ ಬಿಡುಗಡೆ ಮಾಡಲಾಗಿತ್ತು.

ಆತಂಕಕಾರಿ ವಿಷಯ ಅಂದ್ರೆ ಸೋಂಕು ತಗುಲಿರುವುದು ದೃಢವಾದರೂ ಮಹಿಳೆಯಲ್ಲಿ ಇದುವರೆಗೂ ಯಾವುದೇ ಕೋವಿಡ್ ಗುಣ ಲಕ್ಷಣಗಳು ಕಂಡುಬಂದಿಲ್ಲ.

ಸೊಂಕು ದೃಢಪಟ್ಟ ಬಗ್ಗೆ ವರದಿ ಬರುತ್ತಿದ್ದಂತೆ ಇಂದು ಬೆಳಗ್ಗೆ ಮಹಿಳೆಯನ್ನು ಯಾದಗಿರಿಯ ಹೈಸಲ್ಯೂಷನ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪರಸನಹಳ್ಳಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಸೋಂಕಿತ ಮಹಿಳೆ ಗ್ರಾಮದಲ್ಲಿ ಇದ್ದಿದ್ದರಿಂದ ಕೋವಿಡ್ ಭೀತಿ ಜನರನ್ನು ಆವರಿಸಿದೆ.

ABOUT THE AUTHOR

...view details