ಗದಗದಲ್ಲಿಂದು ಮತ್ತೊಂದು ಕೊರೊನಾ ಪ್ರಕರಣ ಪತ್ತೆ... 79 ಕ್ಕೇರಿದ ಸೋಂಕಿತರ ಸಂಖ್ಯೆ - Gadag corona cases
ಮಹಾರಾಷ್ಟ್ರ ದಿಂದ ಬಂದ ವಲಸಿಗರ ಪೈಕಿ ಗದಗ ಜಿಲ್ಲೆಯಲ್ಲಿಂದು ಓರ್ವ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಮಹಿಳೆಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
One more corona cases found in gadag
ಗದಗ : ಜಿಲ್ಲೆಯಲ್ಲಿಂದು ಓರ್ವ ಮಹಿಳೆಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 79 ಏರಿಕೆಯಾಗಿದೆ.
ಮಹಾರಾಷ್ಟ್ಟದಿಂದ ಬಂದ ರೋಗಿ -9157, 64 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರು ಮುಂಬೈ-ಗದಗ ಎಕ್ಸ್‌ಪ್ರೆಸ್ ರೈಲಿನ ಮೂಲಕ ಜಿಲ್ಲೆಗೆ ಆಗಮಿಸಿದ್ದರು. ಸದ್ಯ ಮಹಿಳೆಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. 44 ಜನರು ಗುಣಮುಖರಾಗಿದ್ದಾರೆ. 33 ಸಕ್ರಿಯ ಕೇಸುಗಳಿದ್ದು, ಜಿಮ್ಸ್ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.