ಕರ್ನಾಟಕ

karnataka

ETV Bharat / state

ಪೇಡಾನಗರಿಯಲ್ಲಿ ಇಂದು 20 ಪಾಸಿಟಿವ್.. - Covid-19

ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಕಾಣಿಸಿರೋದು ಆತಂಕ ಸೃಷ್ಟಿಸಿದೆ.

20 new corona cases found in dharwad district
20 new corona cases found in dharwad district

By

Published : Jun 13, 2020, 8:01 PM IST

ಧಾರವಾಡ: ಜಿಲ್ಲೆಯಲ್ಲಿಂದು 20 ಜನರಲ್ಲಿ ಸೋಂಕು ದೃಢಪಡಿದ್ದು, ಸೋಂಕಿತರ‌ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

ಗ್ರಾಮೀಣ ಭಾಗದಲ್ಲೇ ಹೆಚ್ಚು ಜನರಿಗೆ ಸೋಂಕು ಕಾಣಿಸಿದೆ. ಸೋಂಕಿತರ ಸಂಪರ್ಕದಿಂದಲೇ 18 ಜನರಿಗೆ ಸೋಂಕು ತುಗುಲಿದೆ. ಪಿ-5969ರಿಂದ 4 ವರ್ಷದ ‌ಬಾಲಕನಿಗೆ ಸೋಂಕು, ಪಿ-6222 ಸಂಪರ್ಕದಿಂದ ಇಬ್ಬರಿಗೆ ಸೋಂಕು, ಪಿ-5972ರ ಸಂಪರ್ಕದಿಂದ ಮೂವರಿಗೆ ಕೊರೊನಾ ತಗುಲಿದೆ.

ಪಿ-5828ರ ಸಂಪರ್ಕದಿಂದ ಐವರಿಗೆ, ಪಿ-6257ರ ಸಂಪರ್ಕದಿಂದ 2 ವರ್ಷದ ಮಗು ಸೇರಿ 7 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ದೆಹಲಿಯಿಂದ ಆಗಮಿಸಿರುವ ಪಿ-6522 ಮತ್ತು ಮಹಾರಾಷ್ಟ್ರದಿಂದ ಬಂದಿರುವ ಪಿ-6532ಗೆ ಸೋಂಕು ದೃಢಪಟ್ಟಿದೆ.

ಇದರಿಂದ ಇಷ್ಟು ದಿನ‌ ಒಂದೆರಡು ಕೇಸ್ ದಾಖಲಾಗುತ್ತಿದ್ದ ಜಿಲ್ಲೆಯಲ್ಲಿ ಶುಕ್ರವಾರ 19 ಮತ್ತು ಇಂದು 20 ಕೇಸ್ ಪತ್ತೆಯಾಗಿವೆ. ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details