ಶಿವಮೊಗ್ಗ: ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸೃಷ್ಟಿ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಎಲ್ಲವು ಸರಿ ಇದೆ. ನಮ್ಮಲ್ಲಿ ಸರಿ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಮಾಧ್ಯಮದಲ್ಲಿ ಅದನ್ನೇ ಬಿತ್ತರಿಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ, ನಮ್ಮನೆಯ ವಿಚಾರವನ್ನು ನಾವು ಸರಿ ಮಾಡಿಕೊಳ್ಳುತ್ತೇವೆ. ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಬೇಡಿಕೆ ಈಡೇರಿಸಿದ್ದೇವೆ. ಧೈರ್ಯದಿಂದ ಜನರ ಬಳಿ ಚುನಾವಣೆಗೆ ಹೋಗುತ್ತೇವೆ. ಕೊಟ್ಟ ಮಾತು ಉಳಿಸಿಕೊಂಡು ಮಾನ, ಮರ್ಯಾದೆ, ಗೌರವ ಉಳಿಸಿಕೊಂಡಿದ್ದೇವೆ. ಆದರೆ, ಬಿಜೆಪಿಯವರು ಅದನ್ನು ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ವಿಎಸ್ಐಎಲ್ ಶತಮಾನೋತ್ಸವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಯಕ್ರಮ ತುಂಬಾ ಚನ್ನಾಗಿ ಆಯ್ತು. ಮನಸ್ಸಿಗೆ ಬೇಸರ ಸಹ ಆಯ್ತು.
ವಿಶ್ವೇಶ್ವರಯ್ಯ ಮಾಡಿರುವಂತಹ ದೊಡ್ಡ ಕಾರ್ಖಾನೆ ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಮುಜುಗರ ಸಹ ಆಯ್ತು. ಸಂಭ್ರಮಕ್ಕೆ ಯಾರು ಯಾರು ಶ್ರಮ ಹಾಕಿದ್ದರೋ ಅವರೆಲ್ಲಾ ಬಂದಿದ್ದರು. ನಾವೆಲ್ಲಾ ಕಾರ್ಖಾನೆ ಬಗ್ಗೆ ಆಸಕ್ತಿ ತಗೊಂಡು ಉಳಿಸುವ ಕೆಲಸ ಮಾಡಬೇಕು. ಈ ಕಾರ್ಖಾನೆ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಬರುತ್ತದೆ. ನಾನೊಬ್ಬ ಉಸ್ತುವಾರಿ ಸಚಿವನಾಗಿ ವಿಐಎಸ್ಎಲ್ ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತೇನೆ ಎಂದರು. ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರದಲ್ಲಿ, ಸಂಸತ್ತಿನಲ್ಲಿ ಧ್ವನಿ ಎತ್ತಬೇಕಿದೆ. ಕಾರ್ಖಾನೆ ಉಳಿಸಿಕೊಳ್ಳಲು ಬೇಕಾಗುವ ಅವಶ್ಯಕತೆ ಇರುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮಧು ಬಂಗಾರಪ್ಪ ಇದೇ ವೇಳೆ ಹೇಳಿದರು.
ಸಿಎಂ ಕುರ್ಚಿ ಖಾಲಿ ಇಲ್ಲ -ಕೊಪ್ಪಳ: ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. ಕಂಡ ಕಂಡವರೆಲ್ಲ ಸಿಎಂ ಆಗೋದಕ್ಕೆ ಆಗಲ್ಲ. ಅದಕ್ಕೆ ಅದರದ್ದೇ ಆದ ಘನತೆ, ಗೌರವ ಇದೆ, ಅದು ಆಸೆ ಪಟ್ಟು ತೆಗೆದುಕೊಳ್ಳುವುದಲ್ಲ. ಸಿಎಂ ಆಗಬೇಕು ಎಂದರೆ ಆ ಎತ್ತರಕ್ಕೆ ಬೆಳೆಯಬೇಕು ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಕೊಪ್ಪಳದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ ಇಲ್ಲ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು. ಬಳಿಕ ನಾನೂ ಸಿಎಂ ಆಗಲು ರೆಡಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತ್ರಿಕ್ರಿಯಿಸಿ, ಹೈಕಮಾಂಡ್ ಯಾರಿಗೆ ಅವಕಾಶ ಕೊಡುತ್ತಾರೋ ಮತ್ತು ಜನರು ಯಾರಿಗೆ ಅಶೀರ್ವಾದ ಮಾಡುತ್ತಾರೋ ಅವರು ಸಿಎಂ ಆಗುತ್ತಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಇದನ್ನೂ ಓದಿ:ರಾಜ್ಯ ಸರ್ಕಾರ ಅತಿ ಶೀಘ್ರದಲ್ಲೇ ಪತನವಾಗಲಿದೆ: ಕೆ.ಎಸ್.ಈಶ್ವರಪ್ಪ ಭವಿಷ್ಯ