ಶಿವಮೊಗ್ಗ: ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಗೊಂದಲದಲ್ಲಿಯೇ ಮುಕ್ತಾಯ ಕಂಡಿದೆ. ಡಿಸೆಂಬರ್ನಲ್ಲಿ ನಡೆಯಬೇಕಿದ್ದ ಚುನಾವಣೆಯು ಮತಪತ್ರಗಳ ಗೊಂದಲದಿಂದ ನಿನ್ನೆಗೆ ಮುಂದೂಡಲಾಗಿತ್ತು.
ಗೊಂದಲದಲ್ಲಿಯೇ ಮುಗಿದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ - ಗೊಂದಲದಲ್ಲಿಯೇ ಮುಗಿದ ಪ್ರದೇಶ ಕುರುಬರ ಸಂಘದ ನಿರ್ದೇಶಕರ ಚುನಾವಣೆ
ಕರ್ನಾಟಕ ಪ್ರದೇಶ ಕುರುಬರ ಸಂಘದ ಚುನಾವಣೆ ಗೊಂದಲದಲ್ಲಿಯೇ ಮುಕ್ತಾಯ ಕಂಡಿದೆ. ಮತ ಎಣಕೆ ವೇಳೆ ಮುರುಗೇಶ್, ಮತಪತ್ರದಲ್ಲಿ ಮತದಾನ ಮಾಡಿದವರು ತಮ್ಮ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸಬೇಕು ಎಂದು ತಗಾದೆ ತೆಗೆದರು.
ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಹಲವು ಗೊಂದಲಗಳಿಂದ ಚುನಾವಣೆ ಮುಕ್ತಾಯ ಕಂಡಿತು. ಜಿಲ್ಲೆಯಿಂದ ಮೂರು ಪುರುಷ ನಿರ್ದೇಶಕರು ಹಾಗೂ ಓರ್ವ ಮಹಿಳಾ ನಿರ್ದೆಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶರತ್.ಎಸ್.ಕೆ ಇವರು 3,549 ಮತಗಳಿಂದ ಜಯಗಳಿಸಿದ್ರು. ಕಬಾಡಿ ರಾಜಣ್ಣ ಇವರು 2,166 ಮತ, ರಂಗನಾಥ್ ರವರು 1,853 ಮತ, ಮಹಿಳಾ ಅಭ್ಯರ್ಥಿ ಡಾ.ಸೌಮ್ಯ ಅವರು 3,248 ಮತಗಳನ್ನು ಪಡೆದಿದ್ದರು.
ಮತ ಎಣಕೆ ವೇಳೆ, ಮುರುಗೇಶ್ ರವರು ಮತಪತ್ರದಲ್ಲಿ ಮತದಾನ ಮಾಡಿದವರು ತಮ್ಮ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸಬೇಕು ಎಂದು ತಗಾದೆ ತೆಗೆದರು. ಈ ವೇಳೆ ಚುನಾವಣಾಧಿಕಾರಿ ಮತಪತ್ರಕ್ಕೆ ಹೆಬ್ಬೆಟ್ಟು ಹಾಕಿರುವುದನ್ನು ಪರಿಗಣಿಸದೇ ಇರುವುದನ್ನು ಖಂಡಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ಉಂಟಾಯಿತು. ಕೋಟೆ ಪೊಲೀಸ್ ಸಿಪಿಐ ಮಾದಪ್ಪನವರು ಹಾಗೂ ಮರುಗೇಶ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.