ಶಿವಮೊಗ್ಗ:ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನ ಸಹಾಯದ ಕುರಿತು ವಾಟ್ಸಪ್ ನಲ್ಲಿ ಸಿಎಂ ಬಗ್ಗೆ ಅವಹೇಳನಕಾರಿಯಾಗಿ ವಾಯ್ಸ್ ಮೆಸೇಜ್ ಮಾಡಿದ ಇಬ್ಬರು ಶಿಕ್ಷಕರನ್ನು ಹಾಗೂ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಓಡಾಡಲು ಇಲಾಖೆ ವಾಹನ ವ್ಯವಸ್ಥೆ ಮಾಡುವಂತೆ ವಾಟ್ಸಪ್ ನಲ್ಲಿ ವಿಷಯ ಪ್ರಸ್ತಾಪಿಸಿದ ಎಎಸ್ಐರನ್ನು ಅಮಾನತು ಮಾಡಲಾಗಿದೆ.
ಸಿಎಂ ವಿರುದ್ಧ ಆಡಿಯೋ ಸಂದೇಶ: ಇಬ್ಬರು ಶಿಕ್ಷಕರ ಅಮಾನತು, ಕಮೆಂಟ್ ಮಾಡಿದ ಎಎಸ್ಐ ಕೂಡ ಸಸ್ಪೆಂಡ್ - ಸಿಎಂ ಬಗ್ಗೆ ಅವಹೇಳನಕಾರಿಯಾಗಿ ವಾಯ್ಸ್ ಮೆಸೇಜ್
ವಾಟ್ಸಪ್ ಗ್ರೂಪ್ನಲ್ಲಿ ಸಿಎಂ ಬಗ್ಗೆ ಅವಹೇಳನಕಾರಿಯಾಗಿ ವಾಯ್ಸ್ ಮೆಸೇಜ್ ಮಾಡಿದ ಇಬ್ಬರು ಶಿಕ್ಷಕರು ಅಮಾನತುಗೊಂಡಿದ್ದಾರೆ. ಗ್ರೂಪ್ನಲ್ಲಿ ಕಮೆಂಟ್ ಮಾಡಿದ್ದ ಎಎಸ್ಐ ಕೂಡ ಸಸ್ಪೆಂಡ್ ಆಗಿದ್ದಾರೆ.
ಸೊರಬ ತಾಲೂಕು ಆನವಟ್ಟಿಯ ಶಿಕ್ಷಕರಾದ ಡಾ. ಕ್ಯಾನಾಯ್ಕ್ ತಮ್ಮ ಸಿಆರ್ಸಿ ಆನವಟ್ಟಿ ಟೀಚರ್ಸ್ ವಾಟ್ಸಪ್ ಗ್ರೂಪ್ನಲ್ಲಿ 'ಹಲೋ ಸಿಎಂ ಸಾಹೇಬ್ರೇ ಫ್ರೀ ಇದ್ದೀರಾ. ಕೊರೊನಾ ಪರಿಹಾರಕ್ಕೆ ಜನರ ಹತ್ರ ದುಡ್ಡು ಎಲ್ಲಿದೆ ಅಂತ ಲಿಸ್ಟ್ ಇಲ್ಲಿದೆ ನೋಡಿ ಎಂಬ ಆಡಿಯೋವನ್ನು ಕಳುಹಿಸಿದ್ಧರು. ಈ ಆಡಿಯೋವನ್ನು ಇದೇ ಗ್ರೂಪ್ನ ಇನ್ನೂರ್ವ ಶಿಕ್ಷಕ ರಾಜು ರವರು really right sir ಎಂದು ಕಮೆಂಟ್ ಮಾಡಿದ್ದರು. ರಾಜು ಆ ಗ್ರೂಪ್ನ ಅಡ್ಮಿನ್ ಆಗಿದ್ದರು. ಶಿಕ್ಷಕರಿಗೆ ಮನೆಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದರು ಸಹ ಕರ್ತವ್ಯ ಲೋಪದ ಆಧಾರದ ಮೇಲೆ ಜಿ.ಪಂ ಸಿಇಓ ಶ್ರೀಮತಿ ವೈಶಾಲಿರವರು ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿದ್ದಾರೆ.
ಅದೇ ರೀತಿ ತೀರ್ಥಹಳ್ಳಿಯ ಎಎಸ್ಐ ಯೂಸಫ್ ತಮಗೆ 50 ವರ್ಷವಾಗಿದ್ದು, ತಾವು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಓಡಾಡುತ್ತಿದ್ದು, ತಮಗೆ ಇಲಾಖೆಯಿಂದ ವಾಹನ ಸೌಕರ್ಯ ಮಾಡಿ ಕೊಡಬೇಕು ಎಂದು ವಾಟ್ಸಪ್ ಗ್ರೂಪ್ನಲ್ಲಿ ಕಾಮೆಂಟ್ ಮಾಡಿದ್ದರು. ಯೂಸಫ್ ಅವರು ತಮ್ಮ ಕರ್ತವ್ಯ ನಿರ್ವಹಿಸುವ ತೀರ್ಥಹಳ್ಳಿಯಲ್ಲಿ ಇರದೆ ಕರ್ತವ್ಯ ಲೋಪ ಎಸಗಿದ್ದಾರೆ ಹಾಗೂ ಇಲಾಖೆಯ ಕುಂದುಕೊರತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪ ಮಾಡಿರುವ ವಿರುದ್ದ ಎಸ್ಪಿ ಶಾಂತರಾಜು ಯೂಸಫ್ ಅವರನ್ನು ಅಮಾನತು ಮಾಡಿದ್ದಾರೆ.