ಶಿವಮೊಗ್ಗ:ನಗರಾದ್ಯಂತ ಸ್ಮಾರ್ಟ್ಸಿಟಿ ಯೋಜನೆಯಡಿ ಹತ್ತು ಹಲವು ಕಾಮಗಾರಿಗಳು ನಡೆಯುತ್ತಿವೆ. ಕೆಲ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದರೆ ಇನ್ನು ಕೆಲ ಕಾಮಗಾರಿಗಳು ಇದೀಗ ಆರಂಭಗೊಂಡಿವೆ.
ಈ ಮಧ್ಯೆ ಶಿವಮೊಗ್ಗ ಹೃದಯಭಾಗದಲ್ಲಿರುವ ಗಾಂಧಿ ಪಾರ್ಕ್ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಜನರನ್ನು ಗಾಂಧಿ ಪಾರ್ಕ್ನತ್ತ ಸೆಳೆಯುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಯೋಜನೆ ರೂಪಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳು ಪಾರ್ಕ್ನ ಸಮೀಪದಲ್ಲೇ ಇರುವುದರಿಂದಾಗಿ ಸರ್ಕಾರಿ ಕಚೇರಿಗೆ ಬಂದವರು ವಿಶ್ರಾಂತಿಗಾಗಿ ಗಾಂಧಿ ಪಾರ್ಕ್ಗೆ ಆಗಮಿಸುತ್ತಾರೆ. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಪಾರ್ಕ್ಗೆ ಆಗಮಿಸುತ್ತಾರೆ. ಬೆಳಗಿನ ವೇಳೆ ವಾಯುವಿಹಾರಕ್ಕೂ ನೂರಾರು ಮಂದಿ ಬರುತ್ತಾರೆ. ಹೀಗಾಗಿ ಪಾರ್ಕ್ನ ಸಮಗ್ರ ಅಭಿವೃದ್ಧಿಗೆ ಪಾಲಿಕೆ ಮುಂದಾಗಿದ್ದು, ಈ ಬಗ್ಗೆ ವಿಸ್ತೃತ ಯೋಜನೆ ರೂಪಿಸಿ, ಸರ್ಕಾರದ ಅನುದಾನ ಮಂಜುರಾತಿಗೆ ಕಳುಹಿಸಿದೆ.