ಶಿವಮೊಗ್ಗ:ಕೊರೊನಾ ಲಾಕ್ಡೌನ್ ಮೀರಿ ರಸ್ತೆಗಿಳಿದ ವಾಹನ ಸವಾರಿಗೆ ದಂಡ ಹಾಕಿದ ಮಹಿಳಾ ಪಿಎಸ್ಐಗೆ ವಾಹನ ಸವಾರ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ವಾಹನ ತಡೆದು ಕೇಸ್ ಹಾಕಿದ್ದಕ್ಕೆ ಮಹಿಳಾ ಪಿಎಸ್ಐಗೆ ಆವಾಜ್: ವಿಡಿಯೋ ವೈರಲ್ - ಶಿವಮೊಗ್ಗ ಮಹಿಳಾ ಪಿಎಸ್ಐಗೆ ಆವಾಜ್
ಶಿವಮೊಗ್ಗದಲ್ಲಿ ಲಾಕ್ಡೌನ್ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಿದ ಮಹಿಳಾ ಪಿಎಸ್ಐಗೆ ವಾಹನ ಸವಾರ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಜೋಗದ ಮಹಿಳಾ ಪಿಎಸ್ಐ ಸರ್ಕಾರದ ಆದೇಶದ ಮೇರೆಗೆ ವಾಹನ ಸವಾರರಿಗೆ ದಂಡ ಹಾಕುವಾಗ ವಾಹನ ಸವಾರರೊಬ್ಬರು ಸಿಎಂ ಯಡಿಯೂರಪ್ಪ ಕೋವಿಡ್ನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಈಗ ನಿಮ್ಮನ್ನು ಲೂಟಿ ಮಾಡಲು ಬಿಟ್ಟಿದ್ದಾನೆ ಎಂದು ಸಿಎಂ ಯಡಿಯೂರಪ್ಪಗೆ ಏಕ ವಚನದಲ್ಲಿ ಬೈದಿದ್ದಾರೆ. ನಂತರ ರಸ್ತೆಯಲ್ಲಿ ಹೈ ಡ್ರಾಮವನ್ನೇ ಮಾಡಿದ್ದಾರೆ.
ರಸ್ತೆ ಮಧ್ಯೆದಲ್ಲಿ ಕುಳಿತು ಪೊಲೀಸ್ ಹಾಗೂ ಸಿಎಂ ಬಿಎಸ್ವೈ ಅವರನ್ನು ಬೈಯ್ದಿದ್ದಾರೆ. ಆದರೂ ಮಹಿಳಾ ಪಿಎಸ್ಐ ಅವರು ತಮ್ಮ ತಾಳ್ಮೆ ಕಳೆದುಕೊಳ್ಳದೇ ಅವರನ್ನು ಸಮಾಧಾನ ಪಡಿಸಲು ಪ್ರಯತ್ನ ಮಾಡುತ್ತಿರುವ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ.