ಶಿವಮೊಗ್ಗ: ವಾಸನೆ ಬರುತ್ತಿದ್ದ ಚಿಕನ್ ಕಬಾಬ್ ಮಾರಾಟ ಮಾಡಿದ ಮಾಲೀಕನಿಗೆ ಗ್ರಾಹಕರು ಚಳಿ ಬಿಡಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ವಾಸನೆ ಬರುತ್ತಿದ್ದ ಚಿಕನ್ ಕಬಾಬ್ ಮಾರಾಟ: ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು - ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು
ವಾಸನೆ ಬರುತ್ತಿದ್ದ ಚಿಕನ್ ಕಬಾಬ್ ಮಾರಾಟ ಮಾಡುತ್ತಿದ್ದ ಮಾಲೀಕನನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮಾಲೀಕನನ್ನು ತರಾಟೆಗೆ ತೆಗೆದುಕೊಂಡ ಗ್ರಾಹಕರು
ಶಿವಮೊಗ್ಗದ ಸುಗ್ಗಿ ಚಿಕನ್ ಶಾಪ್ನಿಂದ ನವುಲೆ ಬಡಾವಣೆಯ ಅಶೋಕ್ ಎಂಬುವರು ನಿನ್ನೆ ರಾತ್ರಿ ಚಿಕನ್ ಕಬಾಬ್ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರೆ. ಇದನ್ನು ತಿಂದ ಮಕ್ಕಳಿಬ್ಬರು ವಾಂತಿ ಮಾಡಿಕೊಂಡಿದ್ದು, ನಂತರ ಕಬಾಬ್ ಪರಿಶೀಲನೆ ಮಾಡಿದಾಗ ಚಿಕನ್ ವಾಸನೆ ಬಂದಿರುವುದು ತಿಳಿದುಬಂದಿದೆ.
ಕೂಡಲೇ ಅಶೋಕ್ ಹಾಗೂ ಅತನ ಸ್ನೇಹಿತ ಅಂಗಡಿಗೆ ಬಂದು ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಉದ್ಧಟತನ ತೋರಿದ್ದು, ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಸ್ಥಳಕ್ಕಾಮಿಸಿದ ಪೊಲೀಸರು ಸುಗ್ಗಿ ಶಾಪ್ ಮಾಲೀಕನನ್ನು ಠಾಣೆಗೆ ಕರೆದೊಯ್ದರು.