ಕರ್ನಾಟಕ

karnataka

ETV Bharat / state

ಜಿಲ್ಲಾ‌ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆಗೆ ಮಂಡಳಿ ನಿರ್ದೇಶಕರ ಆಗ್ರಹ - ಶಿವಮೊಗ್ಗ ಜಿಲ್ಲಾ‌ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ

ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರ ಮೇಲೆ ಹಣ ದುರುಪಯೋಗದ ಆರೋಪ‌ವಿದ್ದು, ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಡಿಸಿಸಿ ಬ್ಯಾಂಕ್​ನ ಉಪಾಧ್ಯಕ್ಷ ಚನ್ನವೀರಪ್ಪ ಆಗ್ರಹಿಸಿದ್ದಾರೆ.

By

Published : Aug 1, 2020, 6:29 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ‌ ಕೇಂದ್ರ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಅವರ ಮೇಲೆ ಹಣ ದುರುಪಯೋಗದ ಗುರುತರ ಆರೋಪ‌ ಇರುವುದರಿಂದ ತಮ್ಮ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಡಿಸಿಸಿ ಬ್ಯಾಂಕ್​ನ ಉಪಾಧ್ಯಕ್ಷ ಚನ್ನವೀರಪ್ಪ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಜಿಲ್ಲಾ‌ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರ ರಾಜೀನಾಮೆಗೆ ಆಡಳಿತ ಮಂಡಳಿ ನಿರ್ದೇಶಕರ ಆಗ್ರಹ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಮಂಜುನಾಥ ಗೌಡರವರು ಬ್ಯಾಂಕ್​ನಲ್ಲಿ ಸರ್ವಧಿಕಾರಿಯಂತೆ ಆಡಳಿತ ನಡೆಸಿದ್ದಾರೆ. ಈಗಾಗಲೇ ಸಹಕಾರ ಇಲಾಖೆ ಕೋರ್ಟ್​ನಲ್ಲಿ ಬ್ಯಾಂಕ್​ಗೆ 6 ತಿಂಗಳ‌ ಕಾಲ ಆರ್ಥಿಕ ಆಡಳಿತಾತ್ಮಕ ವ್ಯವಹಾರ ನಡೆಸದಂತೆ ತಿಳಿಸಿದೆ. ನಕಲಿ ಬಂಗಾರದ ಸಾಲದ ಮೇಲಿನ ಆರೋಪ ಅವರ ಮೇಲಿದೆ. ಬ್ಯಾಂಕ್​ನ ಸಲಹಾ ಸಮಿತಿ ಅಧ್ಯಕ್ಷರಾಗಿ ಅವರು ಸಭೆಯನ್ನೇ ನಡೆಸಿಲ್ಲ. ನಕಲಿ ಬಂಗಾರ ಅಡಮಾನ ವಿಚಾರದಲ್ಲಿ ಹಿಂದಿನ ಮ್ಯಾನೇಜರ್ ಶೋಭಾರವರಿಗೆ ಅಕ್ರಮವಾಗಿ ಮೂರು ಬಾರಿ ಪದೋನ್ನತಿ ನೀಡಲಾಗಿದೆ. ಈ ಮೂಲಕ ಬ್ಯಾಂಕ್​ನಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಶಿವಮೊಗ್ಗದ ಬ್ಯಾಂಕ್‌ನಿಂದ ಅಕ್ರಮವಾಗಿ ಹೊರ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗೆ ಸಾಲ ನೀಡಲಾಗಿದೆ. ಇದರಲ್ಲಿ ಬಾಗಲಕೋಟೆಯ ಸಂಗಮ ಸಕ್ಕರೆ ಕಾರ್ಖಾನೆ, ಚನ್ನರಾಯಪಟ್ಟಣದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಾಗೂ ಹೂವಿನಹಡಗಲಿಯ ಮೈಲಾರ ಸಕ್ಕರೆ ಕಾರ್ಖಾನೆಗೆ ಅಕ್ರಮವಾಗಿ ಸಾಲ ನೀಡಲಾಗಿದೆ. ಸಕ್ಕರೆ ಕಾರ್ಖಾನೆಗೆ ಸಾಲ ನೀಡುವ ಕುರಿತು ನಮ್ಮ ನಿರ್ದೇಶರ ಗಮನಕ್ಕೆ ತಾರದೆ ಮೀಟಿಂಗ್ ನಡೆಸಲಾಗುತ್ತದೆ.

ಕಳೆದ ವರ್ಷ ಡಿಸಿಸಿ ಬ್ಯಾಂಕ್ ಜಿಲ್ಲೆಯ ಸಹಕಾರಿ ಬ್ಯಾಂಕ್​ಗಳಿಗೆ ಸಾಲ ನೀಡಿಯೇ ಇಲ್ಲ. ಇದರಿಂದ ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು‌ ನಷ್ಟಕ್ಕೆ‌‌ ಬ್ಯಾಂಕ್‌ ಕಾರಣವಾಗಿದೆ‌ ಎಂದು ಆಗ್ರಹಿಸಿದ್ದಾರೆ. ಈ ವೇಳೆ ನಿರ್ದೇಶಕರಾದ ಶ್ರೀಪಾದ್ ಹೆಗಡೆ ಹಾಗೂ ಬಿ.ಡಿ.ಭೂಕಾಂತ್ ಹಾಜರಿದ್ದರು.

For All Latest Updates

ABOUT THE AUTHOR

...view details