ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಮಳೆ ಮಾಯ, ಶುರುವಾಯ್ತು ಬಿಸಿಲ ಝಳ

ಶಿವಮೊಗ್ಗ ಜಿಲ್ಲೆಯಲ್ಲಿ ಜೋರಾಗಿ ಸುರಿಯಬೇಕಿದ್ದ ಮಳೆಯ ಬದಲು ಈಗ ಬಿಸಿಲು ಆವರಿಸಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಎಷ್ಟಾಗಿದೆ ಗೊತ್ತೇ?

By

Published : Aug 4, 2023, 6:57 PM IST

ಶಿವಮೊಗ್ಗದಲ್ಲಿ ಮಳೆ ಮತ್ತು ಬಿಸಿಲು
ಶಿವಮೊಗ್ಗದಲ್ಲಿ ಮಳೆ ಮತ್ತು ಬಿಸಿಲು

ಶಿವಮೊಗ್ಗದಲ್ಲಿ ಮಳೆ ಬದಲು ಬಿಸಿಲು ಹೆಚ್ಚಾಗಿದೆ.

ಶಿವಮೊಗ್ಗ : ಈ ಅವಧಿಯಲ್ಲಿ ಜೋರು ಮಳೆಯಾಗಬೇಕಿದ್ದ ಜಿಲ್ಲೆಯಲ್ಲಿ ಬಿಸಿಲು ಆವರಿಸಿದೆ. ಮಳೆ ಸಂಪೂರ್ಣ ಕ್ಷೀಣಿಸಿದ್ದು, ಅಲ್ಲಲ್ಲಿ ಚದುರಿದಂತೆ ಸುರಿಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 54.70 ಮಿಮೀ ಮಳೆ ಬಿದ್ದಿದ್ದು, ಸರಾಸರಿ 7.81 ಮಿಮೀ ಮಳೆ ದಾಖಲಾಗಿದೆ. ಇದೇ ವೇಳೆ ತಾಪಮಾನ ಏರಿಕೆಯಾಗುತ್ತಿದ್ದು, ಕನಿಷ್ಠ 26 ಡಿಗ್ರಿಯಿಂದ ಗರಿಷ್ಠ 28 ಡಿಗ್ರಿವರೆಗೂ ದಾಖಲಾಗುತ್ತಿದೆ. ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆಗೆ ಕೊಡೆ ಬಳಸುವ ಬದಲು ಜನ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳಲು ಬಳಸುವಂತಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮೀ ಇದ್ದು, ಇದುವರೆಗೆ ಸರಾಸರಿ 26.14 ಮಿಮಿ ಮಳೆ ಬಿದ್ದಿದೆ.

ಎಲ್ಲೆಲ್ಲಿ ಎಷ್ಟು ಮಳೆ?: ಶಿವಮೊಗ್ಗ ನಗರದಲ್ಲಿ 2.00 ಮಿಮೀ, ಭದ್ರಾವತಿ 1.60 ಮಿಮೀ, ತೀರ್ಥಹಳ್ಳಿ 13.40 ಮಿಮೀ, ಸಾಗರ 15.80 ಮಿಮೀ, ಶಿಕಾರಿಪುರ 3.30 ಮಿಮೀ, ಸೊರಬ 6.00 ಮಿಮೀ ಹಾಗೂ ಹೊಸನಗರದಲ್ಲಿ 12.60 ಮಿಮಿ ಮಳೆಯಾಗಿದೆ.

ಜಲಾಶಯಗಳ ನೀರಿನ ಮಟ್ಟ (ಅಡಿ), ಹರಿವು (ಕ್ಯೂಸೆಕ್‌) :

ಲಿಂಗನಮಕ್ಕಿ ಜಲಾಶಯ : 1819 (ಗರಿಷ್ಠ), 1788.90 (ಇಂದಿನ ಮಟ್ಟ), 12854.00 (ಒಳಹರಿವು), 6055.00 (ಹೊರಹರಿವು).

ಭದ್ರಾ ಜಲಾಶಯ : 186 (ಗರಿಷ್ಠ), 164.10 (ಇಂದಿನ ಮಟ್ಟ), 3976.00 (ಒಳಹರಿವು), 191.00 (ಹೊರಹರಿವು).

ತುಂಗಾ ಜಲಾಶಯ : 588.24 (ಗರಿಷ್ಠ), 588.24 (ಇಂದಿನ ಮಟ್ಟ), 10393.00 (ಒಳಹರಿವು), 10393.00 (ಹೊರಹರಿವು).

ಮಾಣಿ ಜಲಾಶಯ :595 (ಎಂಎಸ್‍ಎಲ್‍ಗಳಲ್ಲಿ), 581.10 (ಇಂದಿನ ಮಟ್ಟ), 1773 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ).

ಪಿಕ್‍ಅಪ್ : 563.88 (ಎಂಎಸ್‍ಎಲ್‍ಗಳಲ್ಲಿ), 561.38 (ಇಂದಿನ ಮಟ್ಟ), 1106 (ಒಳಹರಿವು), 1308.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 561.62 (ಎಂಎಸ್‍ಎಲ್‍ಗಳಲ್ಲಿ).

ಚಕ್ರ : 580.57 (ಎಂ.ಎಸ್.ಎಲ್‍ಗಳಲ್ಲಿ), 572.12 (ಇಂದಿನ ಮಟ್ಟ), 656.00 (ಒಳಹರಿವು), 1616.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 572.60 (ಎಂಎಸ್‍ಎಲ್‍ಗಳಲ್ಲಿ).

ಸಾವೆಹಕ್ಲು : 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 578.36 (ಇಂದಿನ ಮಟ್ಟ), 906.00 (ಒಳಹರಿವು), 1485.00 (ಹೊರಹರಿವು ಕ್ಯೂಸೆಕ್ಸ್‍ಗಳ ಲ್ಲಿ), ಕಳೆದ ವರ್ಷ ನೀರಿನ ಮಟ್ಟ 573.70 (ಎಂಎಸ್‍ಎಲ್‍ಗಳಲ್ಲಿ).

ರೈತರಿಗೆ ಒಂದೆಡೆ ಸಂತಸ, ಮತ್ತೊಂದೆಡೆ ಆತಂಕ :ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕಾಣೆಯಾಗಿದ್ದು, ಇದೀಗ ಒಂದೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇನ್ನೊಂದೆಡೆ ಭತ್ತ ನಾಟಿ ಮಾಡುತ್ತಿರುವ ರೈತರು ಮಳೆ ಇಲ್ಲದೆ ಇರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಮುಂಗಾರು ತಡವಾಗಿ ಬಂದಿದ್ದು ಧವಸ ಧಾನ್ಯಗಳು ಹೇಳಿಕೊಳ್ಳುವ ಮಟ್ಟಕ್ಕೆ ಉತ್ಪಾದನೆಯಾಗಿಲ್ಲ. ಈ ನಡುವೆ ಮಳೆ ಮಾಯವಾಗಿದ್ದು ಕೊಂಚ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ :ಶಿವಮೊಗ್ಗ ಮಳೆ: ಅಂಜನಾಪುರ ಜಲಾಶಯ ಭರ್ತಿ.. ದಂಡಾವತಿ, ತುಂಗಾ ನದಿಗೆ ಬಾಗಿನ ಅರ್ಪಣೆ

ABOUT THE AUTHOR

...view details