ಶಿವಮೊಗ್ಗ: ಬೀದಿನಾಟಕ ಕಾರ್ಯಕ್ರಮಗಳನ್ನು ಶೀಘ್ರವಾಗಿ ಆರಂಭಿಸಲು ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿ ಬೀದಿನಾಟಕ ಕಲಾವಿದರ ಬದುಕಿಗೆ ಸರ್ಕಾರ ಆಸರೆಯಾಗಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬೀದಿನಾಟಕ ಕಲಾತಂಡಗಳ ಸಂಘ ಇಂದು ಪ್ರತಿಭಟನೆ ನಡೆಸಿತು.
ಬೀದಿನಾಟಕ ಕಲಾವಿದರ ಜಾಗೃತಿ ಕಾರ್ಯಕ್ರಮ ಮಂಜೂರಿಗೆ ಆಗ್ರಹಿಸಿ ಪ್ರತಿಭಟನೆ - Association of street theater artists
ಕೊರೊನಾ ವೈರಸ್ ಹಾವಳಿಯಿಂದಾಗಿ ಸರ್ಕಾರದ ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಇದರಿಂದಾಗಿ ಬೀದಿನಾಟಕಗಳನ್ನೇ ನಂಬಿದ್ದ ಕಲಾವಿದರ ಬದುಕು ಶೋಚನೀಯವಾಗಿದೆ.
ಬೀದಿನಾಟಕ ಕಲಾವಿದರಿಗೆ ಜಾಗೃತಿ ಯೋಜನೆ ಮಂಜೂರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕೊರೊನಾ ವೈರಸ್ ಹಾವಳಿಯಿಂದಾಗಿ ಸರ್ಕಾರದ ಯಾವುದೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿಲ್ಲ. ಇದರಿಂದಾಗಿ ಬೀದಿನಾಟಕಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಕಲಾವಿದರ ಬದುಕು ಶೋಚನೀಯವಾಗಿದೆ.
ಜೀವನ ನಡೆಸುವುದು ಸಹ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಪ್ರಚಾರದ ಯೋಜನೆಗಳನ್ನು ಕಲಾ ತಂಡಗಳಿಗೆ ಮಂಜೂರು ಮಾಡಿ ಕಲಾವಿದರ ಸಂಕಷ್ಟಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುವ ಮೂಲಕ ಬೀದಿನಾಟಕ ಕಲಾವಿದರ ಬದುಕಿಗೆ ಆಸರೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.