ಶಿವಮೊಗ್ಗ:ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಗ್ರಾಮದಲ್ಲಿ ಮಾಜಿ ಸಚಿವರುಗಳಾದ ಕಾಗೋಡು ತಿಮ್ಮಪ್ಪ ಹಾಗೂ ಕಿಮನ್ನೆ ರತ್ನಾಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಕಾಗೋಡಿನಲ್ಲಿ ಪ್ರತಿಭಟನೆ
ಕಾಗೋಡು ನೆಲದ ಮಣ್ಣನ್ನು ಬೆಂಗಳೂರಿಗೆ ಕಳಿಸಿಕೊಡುವ ಮೂಲಕ ವಿನೂತನವಾಗಿ ಮಾಜಿ ಸಚಿವರು ಪ್ರತಿಭಟನೆ ನಡೆಸಿದರು. ಹೋರಾಟದ ಜೈಲು ಅನ್ಯಾಯದ ಬಯಲು ಎಂಬ ಘೋಷ ವಾಕ್ಯದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಭೂಮಿಯ ಹಕ್ಕಿಗಾಗಿ ಉಳುವವನೇ ಭೂ ಒಡೆಯ ಹೋರಾಟ ಕಾಗೋಡಿನಿಂದಲೇ ಪ್ರಾರಂಭವಾಗಿತ್ತು..
ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಕಾಗೋಡಿನಲ್ಲಿ ಪ್ರತಿಭಟನೆ
ಕಾಗೋಡು ನೆಲದ ಮಣ್ಣನ್ನು ಬೆಂಗಳೂರಿಗೆ ಕಳಿಸಿಕೊಡುವ ಮೂಲಕ ವಿನೂತನವಾಗಿ ಮಾಜಿ ಸಚಿವರು ಪ್ರತಿಭಟನೆ ನಡೆಸಿದರು. ಹೋರಾಟದ ಜೈಲು ಅನ್ಯಾಯದ ಬಯಲು ಎಂಬ ಘೋಷ ವಾಕ್ಯದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿಂದೆ ಭೂಮಿಯ ಹಕ್ಕಿಗಾಗಿ ಉಳುವವನೇ ಭೂ ಒಡೆಯ ಹೋರಾಟ ಕಾಗೋಡಿನಿಂದಲೇ ಪ್ರಾರಂಭವಾಗಿತ್ತು. ಹಾಗಾಗಿ, ನೂತನ ಭೂ ಸುಧಾರಣಾ ಕಾಯ್ದೆಯನ್ನು ವಿರೋಧಿಸಿ ಕಾಗೋಡಿನಿಂದಲೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹೋರಾಟ ಪ್ರಾರಂಭಿಸಿದರು.
ಭೂ ಸುಧಾರಣಾ ಕಾಯ್ದೆ ರೈತರಿಗೆ ಮರಣ ಶಾಸನವಾಗುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.