ಶಿವಮೊಗ್ಗ: ಸೆಪ್ಟೆಂಬರ್ 6 ಮತ್ತು 7ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಾರೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸೆ. 7 ಮತ್ತು 8ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಾರೆ: ಸಿಎಂ ಬಿಎಸ್ವೈ - ಸಿಎಂ ಬಿಎಸ್ವೈ
ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಪ್ರವಾಹದ ಕುರಿತು ಬ್ಲೂ ಪ್ರಿಂಟ್ ಮೂಲಕ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಶಿವಮೊಗ್ಗದಲ್ಲಿ ತಿಳಿಸಿದ್ದಾರೆ.
ಕಾರವಾರ ಹಾಗೂ ಹಾವೇರಿ ಜಿಲ್ಲಾ ಪ್ರವಾಸಕ್ಕೂ ಮುನ್ನ ಶಿವಮೊಗ್ಗದಲ್ಲಿ ಹೆಲಿಕಾಪ್ಟರ್ಗೆ ಇಂಧನ ತುಂಬಿಸುವ ಸಲುವಾಗಿ ಶಿವಮೊಗ್ಗಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ, ಮೋದಿಯವರು ರಾಜ್ಯಕ್ಕೆ ಬಂದ ವೇಳೆ ರಾಜಭವನದಲ್ಲಿ ಪ್ರವಾಹದ ಕುರಿತು ಬ್ಲೂ ಪ್ರಿಂಟ್ ಮೂಲಕ ಮನವರಿಕೆ ಮಾಡಿಕೊಡಲಾಗುವುದು ಎಂದರು. ಈಗಾಗಲೇ ರಾಜ್ಯಕ್ಕೆ ಕೇಂದ್ರದ ನೆರೆ ವೀಕ್ಷಣಾ ತಂಡ ಆಗಮಿಸಿ ವೀಕ್ಷಣೆ ಮಾಡಿದೆ. ಇವರ ವರದಿಯ ನಂತ್ರ ಕೇಂದ್ರ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದರು. ಇನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದರು.
ಶಿವಮೊಗ್ಗದಲ್ಲಿ ಹೆಚ್ಚೆಚ್ಚು ಕೈಗಾರಿಕೆ ಬರಬೇಕೆಂಬ ಉದ್ದೇಶದಿಂದ ನಿಂತಿರುವ ವಿಮಾನ ನಿಲ್ದಾಣ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದೇನೆ. ನಗರದ ವರ್ತುಲ ರಸ್ತೆ ಅಭಿವೃದ್ಧಿ ಹಾಗೂ ಹಳೆ ಜೈಲು ಆವರಣವನ್ನು ಸುಂದರ ಉದ್ಯಾನವನವನ್ನಾಗಿ ಮಾಡಿ ಸಾರ್ವಜನಿಕರಿಗೆ ಮೀಸಲಿಡಲಾಗುವುದು ಎಂದರು. ಇನ್ನು ನಮ್ಮ ಮೊದಲ ಆದ್ಯತೆ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡುವುದಾಗಿದೆ ಎಂದು ತಿಳಿಸಿದ್ರು. ಮಳೆಯಿಂದಾಗಿ ಕಾರವಾರ ಪ್ರವಾಸ ರದ್ದು ಮಾಡಿ ಸಿಎಂ ಹಾವೇರಿ ಜಿಲ್ಲೆಗೆ ಪ್ರಯಾಣ ಬೆಳೆಸಿದರು