ಕರ್ನಾಟಕ

karnataka

ETV Bharat / state

ಪಿಎಫ್ಐ ನಿಷೇಧ ಕೇಂದ್ರದ ಐತಿಹಾಸಿಕ ನಿಲುವು: ಸಂಸದ ಬಿ.ವೈ.ರಾಘವೇಂದ್ರ - ಪಿಎಫ್ಐ ಸಂಘಟನೆ ಬ್ಯಾನ್ ಬಿವೈ ರಾಘವೇಂದ್ರ ಪ್ರತಿಕ್ರಿಯೆ

ಪಿಎಫ್ಐ ಸಂಘಟನೆ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ ಈ ಸಂಘಟನೆಗಳ ನಿಷೇಧ ತುಂಬಾ ದಿನಗಳ ಬೇಡಿಕೆಯಾಗಿತ್ತು. ಇದು ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.

BY Raghavendra
ಸಂಸದ ಬಿ.ವೈ.ರಾಘವೇಂದ್ರ

By

Published : Sep 28, 2022, 2:02 PM IST

ಶಿವಮೊಗ್ಗ:ಪಿಎಫ್​ಐ ನಿಷೇಧ ಕೇಂದ್ರ ಸರ್ಕಾರ ಐತಿಹಾಸಿಕ ನಿಲುವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿಕಾರಿಪುರದಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತ ಪಿಎಫ್​ಐ ಸೇರಿದಂತೆ ಐದು ಸಂಘಟನೆಗಳಿಗೆ ಕೇಂದ್ರ ನಿಷೇಧ ಹೇರಿದೆ. ಇದಕ್ಕೆ ನಾಡಿನ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದರು.

ಪಿಎಫ್ಐ ಸಂಘಟನೆ ಬ್ಯಾನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಬಿ.ವೈ.ರಾಘವೇಂದ್ರ

ಇತ್ತೀಚೆಗೆ ಎನ್‍ಐಎ ದೇಶದ 15 ರಾಜ್ಯಗಳಲ್ಲಿ ದಾಳಿ ಮಾಡಿ ನೂರಾರು ಜನರನ್ನು ಬಂಧಿಸಲಾಗಿತ್ತು. ಈ ಸಂಘಟನೆಗಳ ನಿಷೇಧ ತುಂಬಾ ದಿನಗಳ ಬೇಡಿಕೆಯಾಗಿತ್ತು. ಇದು ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಫ್ಐ ಸಂಘಟನೆ ಬ್ಯಾನ್.. ಪ್ರಮೋದ್ ಮುತಾಲಿಕ್‌ ಖುಷ್​

ABOUT THE AUTHOR

...view details