ಶಿವಮೊಗ್ಗ:ಸಿಮ್ಸ್ನಲ್ಲಿ ಕೊರೊನಾ ಲಸಿಕೆ ಪಡೆಯಲು ಬಂದವರಲ್ಲಿ ಗೊಂದಲ ಏರ್ಪಟ್ಟು ನೂಕು ನುಗ್ಗಲು ಉಂಟಾಗಿದೆ.
ಶಿವಮೊಗ್ಗದ ಸಿಮ್ಸ್ನಲ್ಲಿ ಕೊರೊನಾ ಲಸಿಕೆ ಹಾಕುವ ವೇಳೆ ನೂಕು ನುಗ್ಗಲು - ಶಿವಮೊಗ್ಗ ಕೋವಿಡ್ -19 ಲೇಟೆಸ್ಟ್ ನ್ಯೂಸ್
ಶಿವಮೊಗ್ಗದಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವಾಗ ನೂಕು ನುಗ್ಗಲು ಉಂಟಾಗಿದೆ. 45 ವರ್ಷ ಮೇಲ್ಪಟ್ಟವರ ಸಾಲಿನಲ್ಲಿ ತಡವಾಗಿ ಬಂದವರು ಮುಂದೆ ಬಂದು ನಿಂತ ಹಿನ್ನೆಲೆ ಸಿಮ್ಸ್ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸಿಮ್ಸ್ನಲ್ಲಿ ಕೊರೊನಾ ಲಸಿಕೆ ಹಾಕುವ ವೇಳೆ ನೂಕು ನುಗ್ಗಲು
ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಿಮ್ಸ್ನಲ್ಲಿ ಕೊರೊನಾ ವಾರಿಯರ್ಸ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಆದರೆ ಇಂದು ಬೆಳಗ್ಗೆ ಲಸಿಕೆ ಹಾಕುವ ವೇಳೆ ನೂಕು ನುಗ್ಗಲು ಉಂಟಾಯಿತು.
45 ವರ್ಷ ಮೇಲ್ಪಟ್ಟವರ ಸಾಲಿನಲ್ಲಿ ತಡವಾಗಿ ಬಂದವರು ಮುಂದೆ ಬಂದು ನಿಂತಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಲಸಿಕೆ ಹಾಕುವುದನ್ನು ಮುಂದುವರೆಸಲಾಯಿತು.