ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತ: ಗಾಯಾಳುಗಳ ಆಸ್ಪತ್ರೆಗೆ ಸಾಗಿಸಲು ನೆರವಾದ ಸಚಿವ ಸಿ.ಸಿ.ಪಾಟೀಲ್ - ಶಿವಮೊಗ್ಗ ಸುದ್ದಿ

ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಗಾಯಾಳುಗಳಿಗೆ ನೀರು ಕುಡಿಸಿ ಉಪಚರಿಸಿ ನಂತರ ಆಸ್ಪತ್ರೆಗೆ ಸೇರಿಸಲು ಸಚಿವ ಸಿ.ಸಿ.ಪಾಟೀಲ್​ ಸಹಾಯ ಮಾಡಿದ್ದಾರೆ.

minister cc patil helps move accident victims  to hospital
ಗಾಯಾಳುಗಳಿಗೆ ಸಚಿವ ಸಿ.ಸಿ.ಪಾಟೀಲ್ ನೆರವು

By

Published : Aug 29, 2021, 5:47 PM IST

ಶಿವಮೊಗ್ಗ: ಬೈಕ್ ಹಾಗೂ ಕಾರು ನಡುವೆ ಅಪಘಾತವಾಗಿ ರಸ್ತೆಯಲ್ಲಿ ಬಿದ್ದು‌ ಒದ್ದಾಡುತ್ತಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಸಚಿವ ಸಿ.ಸಿ.ಪಾಟೀಲ್ ನೆರವಾಗಿ ಮಾನವೀಯತೆ ಮೆರೆದರು.

ಗಾಯಾಳುಗಳಿಗೆ ಸಚಿವ ಸಿ.ಸಿ.ಪಾಟೀಲ್ ನೆರವು

ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಬಳಿ ಸಚಿವ ಪಾಟೀಲ ಅವರು ಶಿಕಾರಿಪುರದ ಕಡೆಯಿಂದ ಹಾನಗಲ್ಲಿನ ಕಡೆ ಹೊರಟು ಬರುತ್ತಿದ್ದಾಗ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿ, ಮಹಿಳೆಯರಿಬ್ಬರು ಗಾಯಗೊಂಡಿದ್ದರು. ಇದನ್ನು ಗಮನಿಸಿದ ಸಚಿವರು ತಮ್ಮ ಕಾರು ನಿಲ್ಲಿಸಿ, ಗಾಯಾಳುಗಳನ್ನು ಉಪಚರಿಸಿ, ನೀರು ಕುಡಿಸಿದ್ದಾರೆ.

ನಂತರ ವಾಹನದ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.‌ ಆದರೆ ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ, ಗಾಯಾಳು ಸಹ ಪೊಲೀಸರಿಗೆ ದೂರು ನೀಡಿಲ್ಲ.

ಇದನ್ನೂ ಓದಿ: Fit India: ಫಿಟ್‌ ಇಂಡಿಯಾ ಮೊಬೈಲ್‌ ಆ್ಯಪ್ ಲೋಕಾರ್ಪಣೆ: ಸ್ಕಿಪ್ಪಿಂಗ್ ಮಾಡಿ ಗಮನ ಸೆಳೆದ ಅನುರಾಗ್ ಠಾಕೂರ್

ABOUT THE AUTHOR

...view details