ಶಿವಮೊಗ್ಗ:ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಮನೆ ಗೋಡೆ ಕುಸಿದು ವ್ಯಕ್ತಿ ಸಾವು... ಪತ್ನಿ, ಮಕ್ಕಳಿಗೆ ಗಾಯ - ವ್ಯಕ್ತಿ ಸಾವು
ಇಂದು ಬೆಳಗಿನಜಾವ ಮನೆಯೊಳಗಿನ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
Shimoga
ಗುರು(40) ಮೃತ ವ್ಯಕ್ತಿ. ಮನೆಯೊಳಗಿನ ಗೋಡೆ ಕುಸಿದಿದ್ದು, ಘಟನೆಯಲ್ಲಿ ಗುರು ಪತ್ನಿ ಗಂಗಮ್ಮ (33), ಮಕ್ಕಳಾದ ಮಂಜುನಾಥ್ (16), ಭೂಮಿಕಾ (14) ಇವರಿಗೆ ಸಣ್ಣಪುಟ್ಟ ಗಾಯವಾಗಿವೆ. ಗಾಯಾಳುಗಳನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.