ಶಿವಮೊಗ್ಗ:ಸಚಿವರು ಕೋರ್ಟ್ಗೆ ಯಾವ ಯಾವ ಕಾರಣಕ್ಕೆ ಅರ್ಜಿ ಹಾಕಿದ್ದಾರೋ ನನಗೆ ತಿಳಿದಿಲ್ಲ, ನೀವು ಅವರನ್ನೇ ಕೇಳಬೇಕು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಾರಕಿಹೊಳಿ ಪ್ರಕರಣದಲ್ಲಿ ಮಾಧ್ಯಮದಲ್ಲಿ ಬಂದ ಅಶ್ಲೀಲ ದೃಶ್ಯಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬ ದೃಷ್ಟಿಯಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದೇನೆ ಎಂದರು.
ಭದ್ರಾವತಿ ಘಟನೆ ಕುರಿತು ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡ್ತಾರೆ, ಆದರೆ ಚುನಾವಣೆ ಮುಗಿದ ಮೇಲೆ ಬಡಿದಾಟ ಮಾಡಿಕೊಂಡಿಲ್ಲ. ಚುನಾವಣೆ ಮುಗಿದ ಮೇಲೆ ಎಲ್ಲರೂ ಅಣ್ಣ ತಮ್ಮಂದಿರ ರೀತಿ ಇದ್ದೇವೆ. ಕಬಡ್ಡಿ ಪಂದ್ಯಾವಳಿಯಲ್ಲಿ ಜೈ ಶ್ರೀರಾಮ, ಭಾರತ ಮಾತಾಕೀ ಜೈ ಅಂತಾ ಕೂಗಿದ್ದಕ್ಕೆ ಹಲ್ಲೆ ಆಗಿದೆ ಅಂತ ಕೇಳಿದ್ದೇನೆ. ಈ ಪ್ರಕರಣವನ್ನು ಇಲ್ಲಿಗೆ ಮುಗಿಸುವುದು ಸೂಕ್ತ. ಭದ್ರಾವತಿಯನ್ನು ಎಲ್ಲರು ಸೇರಿ ಯಥಾಸ್ಥಿತಿಗೆ ತರಬೇಕು ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.