ಶಿವಮೊಗ್ಗ: ಜಿಲ್ಲಾ ಕನಕ ಮಹಿಳಾ ಸಂಘದ ವತಿಯಿಂದ ಇಂದು ಯುಪಿಎಸ್ಸಿ ಪರೀಕ್ಷೆ, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಮಾಜದ ಮಕ್ಕಳಿಗೆ ಸನ್ಮಾನ ನಡೆಸಲಾಯಿತು.
ಯುಪಿಎಸ್ಸಿ ಪರೀಕ್ಷೆಯಲ್ಲಿ 582 ನೇ ರ್ಯಾಂಕ್ ಪಡೆದ ಪೃಥ್ವಿ ಹುಲ್ಲತ್ತಿರವರಿಗೆ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನಿಶ್ಚಿತ ಎಸ್.ಆರ್ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶ್ರೇಯ ಜಿ.ಎಸ್ ಅವರಿಗೆ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.
ಕನಕ ಮಹಿಳಾ ಸಂಘದಿಂದ ಸನ್ಮಾನ ಮೂರು ಜನರಿಗೆ ಶಾಲು, ಹಾರ ಹಾಕಿ ಗೌರವಿಸುವುದರ ಜೊತೆಗೆ ಮೂವರಗೂ ಸಮಯದ ಬಗ್ಗೆ ಯಾವಾಗಲೂ ಅರಿವಿರಬೇಕು ಎಂದು ಎಲ್ಲರಿಗೂ ವಾಚ್ಅನ್ನು ಉಡುಗೊರೆಯಾಗಿ ನೀಡಲಾಯಿತು.
ಕುರುಬ ಸಮಾಜದವರು ಹೆಚ್ಚೆಚ್ಚು ಉನ್ನತ ಹುದ್ದೆಗೆ ಏರಬೇಕು. ಇವರಿಂದ ಸ್ಪೂರ್ತಿ ಪಡೆದು ಮುಂದಿನ ಪೀಳಿಗೆಯು ಇವರನ್ನು ಹಿಂಬಾಲಿಸುವಂತೆ ಇರಬೇಕು ಎಂಬ ಉದ್ದೇಶದಿಂದ ಮೂವರಿಗೂ ಸನ್ಮಾನ ಮಾಡಲಾಯಿತು ಎನ್ನುತ್ತಾರೆ ಕನಕ ಮಹಿಳಾ ಸಂಘದ ಕಾರ್ಯದರ್ಶಿ ಚಿತ್ರಾ. ಈ ವೇಳೆ ಕನಕ ಮಹಿಳಾ ಸಮಾಜದ ಪದಾಧಿಕಾರಿಗಳು ಹಾಗೂ ಸಮಾಜದ ರಮೇಶ್ ಇಕ್ಕೇರಿಯವರು ಹಾಜರಿದ್ದರು.