ಕರ್ನಾಟಕ

karnataka

ETV Bharat / state

ಬಡವರ ಓಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಾ, ಶಾಪ ತಟ್ಟುತ್ತದೆ: ಕೆ.ಎಸ್. ಈಶ್ವರಪ್ಪ

ವಿದ್ಯುತ್ ಬೆಲೆ ಏರಿಕೆಯಿಂದ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

By

Published : Jun 16, 2023, 9:39 PM IST

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಬಡವರಿಂದ ವೋಟು ಹಾಕಿಸಿಕೊಂಡು ಮೋಸ ಮಾಡ್ತಿದ್ದೀರಾ?. ನಿಮಗೆ ಬಡವರ ಶಾಪ ತಟ್ಟೇ ತಟ್ಟುತ್ತದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಆಗಿದೆ. ಈ ಸರ್ಕಾರ ನೇರವಾಗಿ ಹಿಂದೂ ವಿರೋಧಿ ಎಂದರು. ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತಾ ಹೇಳಿದ್ರು. ಇಷ್ಟು ದಿನ ಕೇಂದ್ರ ಸರ್ಕಾರ ಐದು ಕೆಜಿ ಕೊಡ್ತಿತ್ತು. ಚುನಾವಣೆಯಲ್ಲಿ ಗ್ಯಾರಂಟಿ ಕೊಡುವ ಸಂದರ್ಭದಲ್ಲಿ ಮೋದಿ ಅವರಿಗೆ ಈ ಬಗ್ಗೆ ಕೇಳಿದ್ರಾ?. ಅವರಿಗೆ ಕೇಳದೆ ಗ್ಯಾರಂಟಿ ಘೋಷಣೆ ಮಾಡಿದ್ರಾ ಎಂದು ಪ್ರಶ್ನಿಸಿದರು. ‌

ಪದವೀಧರ ಯುವಕರಿಗೆ ಮೂರು ಸಾವಿರ ಕೊಡ್ತೀವಿ ಅಂದ್ರು. ಈ ವರ್ಷ ಪಾಸಾಗಿರುವ ಯುವಕರಿಗೆ ಅಂತೇಳಿ ಮೋಸ ಮಾಡಿದ್ರು. ವಿದ್ಯುತ್ ಬೆಲೆ ಏರಿಕೆಯಿಂದ ಹಾಹಾಕಾರ ಎದ್ದಿದೆ. ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಜನರಿಗೆ ಬೇಕಾದಂತಹ ಸರ್ಕಾರ ಆಗಬೇಕು. ವಿದ್ಯುತ್ ದರವನ್ನು ಬಿಜೆಪಿ ಏರಿಕೆ ಮಾಡಿದ್ದು, ನಾವಲ್ಲ ಅಂತಾರೆ. ಅಕ್ಕಿ ಕೇಂದ್ರ ಸರ್ಕಾರ ಕೊಡ್ತಿಲ್ಲ ಅಂತ ಹೇಳಿ ಪಲಾಯನ ಮಾಡ್ತಿದ್ದಾರೆ ಎಂದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸ್ವಾಗತ ಮಾಡ್ತೇನೆ. ಆದ್ರೆ, ಖಾಸಗಿ ಬಸ್ ಮುಚ್ಚುವ ಸ್ಥಿತಿ ಹಾಗೂ ಆಟೋ ಚಾಲಕರಿಗೆ ಹೊಟ್ಟೆಗೆ ಅನ್ನ ಇಲ್ಲ. ಖಾಸಗಿ ಬಸ್, ಆಟೋದವರಿಗೂ ಉಚಿತ ಕೊಡಿ. ಹೆಣ್ಣು ಮಕ್ಕಳಿಗೆ ಹಣ ಕೊಡ್ತೇವೆ ಅಂತೇಳಿ ಅರ್ಜಿ ಹಾಕೋದನ್ನೇ ಮುಂದು ಹಾಕ್ತಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲ ಗ್ಯಾರಂಟಿ ಘೋಷಣೆ ಮಾಡ್ತೀವಿ ಅಂದ್ರು. ಸರ್ಕಾರ ಬಂದು ಒಂದು ತಿಂಗಳು ಆದ್ರೂ ಕೊಟ್ಟಿಲ್ಲ. ಹೀಗೆ ಎಲ್ಲರಿಗೂ ಮೋಸ ಮಾಡಿ ಅಧಿಕಾರಕ್ಕೆ ಬಂದ್ರಿ. ಇಂತಹ ಅಧಿಕಾರ ಬೇಕಿತ್ತಾ? ಎಂದರು.

ಮೋಸ ಅಂತೂ ಮಾಡಿದ್ದೀರಾ? ನೀವು ಅಕ್ಕಿ ಎಲ್ಲಿಂದ ತರುತ್ತೀರಾ ಗೊತ್ತಿಲ್ಲ. ಅಕ್ಕಿ ಕೊಡಿ,ಇಲ್ಲದಿದ್ದರೆ ಬಡವರಿಗೆ ಅವರ ಅಕೌಂಟ್​ಗೆ ಹಣವನ್ನು ಹಾಕಿ ಎಂದು ಒತ್ತಾಯಿಸಿದರು. ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ವಿಚಾರ, ಸಿದ್ದರಾಮಯ್ಯ, ಡಿಕೆಶಿ ಅವರೇ ನಿಮ್ಮ ಮನೆ ಹೆಣ್ಣು ಮಕ್ಕಳನ್ನು ಬಲತ್ಕಾರವಾಗಿ ಮತಾಂತರ ಮಾಡಿದರೆ ಏನು ಮಾಡ್ತೀರಾ ಎಂದು ಪ್ರಶ್ನಿಸಿದರು.

ಮತಾಂತರ ಕಾಯ್ದೆ ಮುಂದುವರಿಸಬೇಕು: ಕೇರಳ ಸ್ಟೋರಿ‌ ಸಿನಿಮಾ ನೋಡಿದ್ರಾ?. ಮುಸ್ಲಿಮರನ್ನು ಮೆಚ್ಚಿಸಲು ಈ‌ ಕಾಯ್ದೆ ಹಿಂಪಡೆಯುತ್ತಿದ್ದೀರಾ? ಹಿಂದೂಗಳಿಗೆ ಅಪಮಾನ ಮಾಡ್ತಿದ್ದೀರಾ. ಈ ಕಾಯ್ದೆ ಹಿಂಪಡೆದರೆ ಲವ್ ಜಿಹಾದ್ ಆರಂಭವಾಗುತ್ತದೆ. ಸರ್ಕಾರ ಬರುತ್ತೆ ಹೋಗುತ್ತೆ, ಶಾಶ್ವತವಲ್ಲ. ಬಡವರ ರಕ್ಷಣೆಗೆ, ರಾಜ್ಯ ರಕ್ಷಣೆಗೆ ಏನು ಮಾಡಿದ್ರಿ ಅಂತಾ ಜನ ಕೇಳ್ತಾರೆ ಅಷ್ಟೇ. ಅಲ್ಲದೇ ಒಂದು ತಿಂಗಳಿಗೆ ಈ ಸರ್ಕಾರ ಯಾಕಾದ್ರೂ ಬಂತೋ ಅಂತಿದ್ದಾರೆ ಜನ. ತಕ್ಷಣ ಮತಾಂತರ ಕಾಯ್ದೆ ಹಿಂಪಡೆಯುವುದನ್ನು ರದ್ದು ಮಾಡಬೇಕು.ಇಲ್ಲವಾದರೆ, ಮುಂದಿನ ದಿನಗಳಲ್ಲಿ ಬಿಜೆಪಿ ‌ಪ್ರಬಲ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿ ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾನು ಸಿ.ಟಿ. ರವಿ ಜೊತೆ ಪ್ರತಾಪ್ ಸಿಂಹ ಜೊತೆ ಚರ್ಚೆ ಮಾಡಿಲ್ಲ. ಈ ಬಗ್ಗೆ ಕೇಂದ್ರದ ನಾಯಕರ ಜೊತೆ ಮಾತನಾಡುತ್ತೇನೆ. ಈ ರೀತಿ ಹೊಂದಾಣಿಕೆ ನಡೆದಿದ್ದೇ ಆಗಿದ್ದರೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡ್ತೇನೆ ಎಂದರು.

ರಾಜ್ಯದಾದ್ಯಂತ 7 ತಂಡ ಪ್ರವಾಸ:ಇದೇ ತಿಂಗಳ ಜೂನ್ 22 ಹಾಗು 23 ರಂದು ರಾಜ್ಯದಲ್ಲಿ ನಮ್ಮ ಪ್ರವಾಸ ನಡೆಯಲಿದೆ. ನನ್ನ ನೇತೃತ್ವದಲ್ಲಿ ಒಂದು ತಂಡ ಹುಬ್ಬಳ್ಳಿ, ಗದಗ, ಹಾವೇರಿಯಲ್ಲಿ ಪ್ರವಾಸ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ:ಅನ್ನಭಾಗ್ಯ ಯೋಜನೆಗೆ ಅಕ್ಕಿ ನಿರಾಕರಣೆ ಖಂಡಿಸಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ABOUT THE AUTHOR

...view details