ಕರ್ನಾಟಕ

karnataka

ETV Bharat / state

ಗೃಹಿಣಿ ಆತ್ಮಹತ್ಯೆ: ಗಂಡನ ವಿರುದ್ಧ ಕೊಲೆ ಆರೋಪ - ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಗೃಹಿಣಿ ಸಾವು

ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡನ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

House wife suicide in Shimogga
ಗೃಹಿಣಿ ಆತ್ಮಹತ್ಯೆ

By

Published : Feb 10, 2021, 9:17 PM IST

ಶಿವಮೊಗ್ಗ: ನಗರದ ಹೊರವಲಯದ ಗಾಡಿಕೊಪ್ಪದಲ್ಲಿ ಗೃಹಿಣಿಯೊಬ್ಬಳು ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳ ಕುಟುಂಬಸ್ಥರು ಆಕೆಯ ಗಂಡ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಮೋನಿಕಾ ಮೃತ ಮಹಿಳೆ.‌ ಮೋನಿಕಾ ಮತ್ತು ಆಕೆಯ ಪತಿ ಚೇತನ್ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧವನ್ನು ಲೆಕ್ಕಿಸದೆ ಮದುವೆಯಾದ ಈ ಜೋಡಿ, ಗಾಡಿಕೊಪ್ಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಚೇತನ್​ ಮನೆಯಿಂದ ಹೊರಗೆ ಹೋದಾಗ ಮೋನಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಗೆ ಬಂದ ಪತಿ ಚೇತನ್, ತಕ್ಷಣ ಆಕೆಯನ್ನು ಸ್ನೇಹಿತನ‌‌ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆಸ್ಪತ್ರೆಯಲ್ಲಿ ಮೋನಿಕಾ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಮೋನಿಕಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಎನ್ನಲಾದ ವಿಡಿಯೋ

ಓದಿ : ಲಾಡ್ಜ್​ನಲ್ಲಿ ಬಂಧಿಸಿಟ್ಟು ಅಪ್ರಾಪ್ತರ ಮೇಲೆ ಪೋಷಕರಿಂದಲೇ ಹಲ್ಲೆ!

ಬಳಿಕ ಆಕೆಯ ಕುಟುಂಬಸ್ಥರಿಗೆ ಚೇತನ್​ ವಿಷಯ ತಿಳಿಸಿದ್ದಾನೆ. ಆದರೆ ಮೋನಿಕಾ ಪೋಷಕರು ಮಾತ್ರ ಪತಿ ಚೇತನ್ ಆಕೆಯನ್ನು​ ಕೊಲೆ‌ ಮಾಡಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ಈ ನಡುವೆ ಮೋನಿಕಾಳನ್ನು ಚೇತನ್​ ಮತ್ತು ಆಕೆಯ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಲಭ್ಯವಾಗಿದೆ.

ABOUT THE AUTHOR

...view details