ಕರ್ನಾಟಕ

karnataka

ETV Bharat / state

Bitcoin Case.. ಕಾಂಗ್ರೆಸ್​​​ನವರು ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ಬಿಟ್ಟು, ಸಾಕ್ಷಿ ನೀಡಲಿ : ಆರಗ ಜ್ಞಾನೇಂದ್ರ

ಪಂಚನಾಮೆ ವಿಫಲವಾಗಿಲ್ಲ, ಪಾರದರ್ಶಕವಾಗಿದೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅವರನ್ನೇ ಇಟ್ಟುಕೊಂಡೇ ಪಂಚನಾಮೆ ಮಾಡಿದ್ದೇವೆ. ಈಗ ಇಡಿಯವರಿಗೆ ವಿಚಾರಣೆಗಾಗಿ ಕೊಟ್ಟಿದ್ದೇವೆ. ಶ್ರೀಕಿಯಿಂದ ಏನೇನು ಮಾಹಿತಿ ಬಂದಿದೆ, ಅವೆಲ್ಲವನ್ನೂ ನಾವು ನ್ಯಾಯಾಲಯಕ್ಕೆ ಕೊಟ್ಟಿದ್ದೇವೆ. ಅಗತ್ಯವಿದ್ದರೆ, ಉನ್ನತ ತನಿಖೆಗೆ ನಾವು ನೀಡುತ್ತೇವೆ..

ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

By

Published : Nov 13, 2021, 3:33 PM IST

Updated : Nov 13, 2021, 4:00 PM IST

ಶಿವಮೊಗ್ಗ :ಕಾಂಗ್ರೆಸ್‌ನವರು ಸುಮ್ಮ ಸುಮ್ಮನೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದನ್ನು ಬಿಟ್ಟು ತನಿಖಾ ಸಂಸ್ಥೆಗಳಿಗೆ ಸಾಕ್ಷಿಗಳನ್ನು ನೀಡಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ (Bitcoin Case) ವಿಚಾರ ಕಾಂಗ್ರೆಸ್​​​ನವರೇ ಹೇಳಬೇಕು. ಕಾಂಗ್ರೆಸ್​​​ನವರ ಮಕ್ಕಳ ಜೊತೆ ಶ್ರೀಕಿ ಹೆಸರು ಆಗಲೇ ಥಳಕು ಹಾಕಿಕೊಂಡಿತ್ತು. ಸಿದ್ಧರಾಮಯ್ಯನವರ ಸರ್ಕಾರದಲ್ಲಿಯೇ, ಶ್ರೀಕಿಯನ್ನು ಬಿಟ್ಟು ಕಳಿಸಲಾಗಿತ್ತು. ಆಗ ಶ್ರೀಕಿಯನ್ನು ಏಕೆ ಬಿಟ್ಟು ಕಳಿಸಲಾಗಿತ್ತು ಎಂಬುದರ ಬಗ್ಗೆ ಸಿದ್ದರಾಮಯ್ಯನವರೇ ಹೇಳಬೇಕು ಎಂದು ಪ್ರಶ್ನೆ ಮಾಡಿದರು.

ಬಿಟ್‌ ಕಾಯಿನ್‌ ಪ್ರಕರಣದ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿರುವುದು..

2018ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗಲೇ, ಈ ಬಿಟ್ ಕಾಯಿನ್ ಬಗ್ಗೆ ಪ್ರಸ್ತಾಪವಾಗಿತ್ತು. ಶ್ರೀಕಿಯನ್ನು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪೊಲೀಸರು ವಿಚಾರಣೆ ಯಾಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.

ಶ್ರೀಕಿಯಿಂದ ಏನು ನಿರೀಕ್ಷೆ ಮಾಡಿದ್ದರು ಎಂಬುದು ಕಾಂಗ್ರೆಸ್‌ನವರು ಮತ್ತು ಸಿದ್ದರಾಮಯ್ಯನವರೇ ಹೇಳಬೇಕಿದೆ. ಆಗ ಏಕೆ ಶ್ರೀಕಿಯನ್ನು ಬಿಟ್ಟಿದ್ದರು ಎಂಬುದು ಅವರೇ ಹೇಳಬೇಕು. ಈ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್​​ನ ಮಾಜಿ ಶಾಸಕರೊಬ್ಬರ ಮಕ್ಕಳ ಜೊತೆಗಿನ ಡ್ರಗ್ಸ್ ಕೇಸಿನಲ್ಲಿ ಶ್ರೀಕಿ ಸಿಕ್ಕಿ ಹಾಕಿಕೊಂಡಿದ್ದನು. ಆಗ ಈತನೊಬ್ಬ ಅಂತಾರಾಷ್ಟ್ರೀಯ ಹ್ಯಾಕರ್ ಎಂಬುದು ಗೊತ್ತಾಗಿದೆ. ಪಾರದರ್ಶಕವಾಗಿ ಶ್ರೀಕಿಯ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಸೈಬರ್‌ನವರು ಕೂರಿಸಿ ವಿಚಾರಣೆ ನಡೆಸಿದ್ದಾರೆ. ಇಂಟರ್ ಪೋಲ್ ಮತ್ತು ಕೇಂದ್ರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದರು.

ಕಾಂಗ್ರೆಸ್‌ನವರು ಬೊಬ್ಬೆ ಹೊಡೆಯುವುದನ್ನು ಬಿಟ್ಟು ಯಾರನ್ನು ವಿಚಾರಣೆ ಮಾಡಬೇಕೆಂದು ಹೇಳಲಿ. ಈ ವಿಚಾರದಲ್ಲಿ ಸಾಕ್ಷ್ಯಾಧಾರಗಳನ್ನು ನೀಡಿದರೆ, ನಾವು ಅಂತಹವರನ್ನು ವಿಚಾರಣೆ ಮಾಡುತ್ತೇವೆ ಎಂದರು.

ಶ್ರೀಕಿಯನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ಸಾಕಷ್ಟು ವಿಚಾರಣೆ ನಡೆಸಲಾಗಿದೆ. ಇಡಿ ಮತ್ತು ಇಂಟರ್ ಪೋಲ್ ಬೇಕಾಗಿದ್ದ ವ್ಯಕ್ತಿಗೆ ನಾವು ಕೂಡ 7-8 ಕೇಸುಗಳನ್ನು ನಾವು ಹಾಕಿದ್ದೇವೆ. ಆದರೆ, ನ್ಯಾಯಾಲಯ ಬಿಡುಗಡೆ ಮಾಡಿದರೆ ನಾವು ಏನು ಮಾಡುವುದಕ್ಕೆ ಆಗಲ್ಲ ಎಂದರು.

ನಮ್ಮ ಪಂಚನಾಮೆ ಸರಿಯಾಗಿಯೇ ಇದೆ :ಪಂಚನಾಮೆ ವಿಫಲವಾಗಿಲ್ಲ, ಪಾರದರ್ಶಕವಾಗಿದೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅವರನ್ನೇ ಇಟ್ಟುಕೊಂಡೇ ಪಂಚನಾಮೆ ಮಾಡಿದ್ದೇವೆ. ಈಗ ಇಡಿಯವರಿಗೆ ವಿಚಾರಣೆಗಾಗಿ ಕೊಟ್ಟಿದ್ದೇವೆ. ಶ್ರೀಕಿಯಿಂದ ಏನೇನು ಮಾಹಿತಿ ಬಂದಿದೆ, ಅವೆಲ್ಲವನ್ನೂ ನಾವು ನ್ಯಾಯಾಲಯಕ್ಕೆ ಕೊಟ್ಟಿದ್ದೇವೆ. ಅಗತ್ಯವಿದ್ದರೆ, ಉನ್ನತ ತನಿಖೆಗೆ ನಾವು ನೀಡುತ್ತೇವೆ ಎಂದರು.

ಇದರಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಲು ಹೊರಟಿದೆ. ನಲಪಾಡ್‌ನವರೊಂದಿಗೆ ಈತ ಯು ಬಿ ಸಿಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದನು. ಕಾಂಗ್ರೆಸ್​​ನ ಮುಖಂಡರ ಇಬ್ಬರು ಮಕ್ಕಳೊಂದಿಗೆ ಶ್ರೀಕಿ ಇದ್ದನು. ಆಗ ಅವರು ಯಾಕೆ ಇವನನ್ನು ಜೊತೆಗೆ ಇಟ್ಟುಕೊಂಡಿದ್ದರು ಎಂದು ಪ್ರಶ್ನೆ ಮಾಡಿದರು.

Last Updated : Nov 13, 2021, 4:00 PM IST

ABOUT THE AUTHOR

...view details