ಕರ್ನಾಟಕ

karnataka

ETV Bharat / state

ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ; ಪ್ರಧಾನಿ ಭೇಟಿಗೆ ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡಲಿ: ಯಡಿಯೂರಪ್ಪ - ​ ETV Bharat Karnataka

ಆದಷ್ಟು ಬೇಗ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ

By ETV Bharat Karnataka Team

Published : Nov 3, 2023, 12:37 PM IST

Updated : Nov 3, 2023, 1:18 PM IST

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ಬೆಂಗಳೂರು/ಶಿವಮೊಗ್ಗ: ವಿರೋಧ ಪಕ್ಷದ ನಾಯಕರನ್ನು ಹೈಕಮಾಂಡ್ ಆದಷ್ಟು ಬೇಗ ನೇಮಿಸುತ್ತದೆ ಎಂಬ ವಿಶ್ವಾಸವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ವಿರೋಧ ಪಕ್ಷದ ನಾಯಕರನ್ನು ಯಾವಾಗ ಆಯ್ಕೆ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಈಗಾಗಲೇ ಪ್ರಕ್ರಿಯೆ ತಡವಾಗಿದೆ. ಆದಷ್ಟು ಬೇಗ ಆಯ್ಕೆ ಮಾಡಲಾಗುವುದು ಎಂದರು.

ನಮ್ಮ ಪಕ್ಷದ ವತಿಯಿಂದ ಇಂದಿನಿಂದ ಹತ್ತಾರು ತಂಡಗಳು ಬರ ಅಧ್ಯಯನಕ್ಕಾಗಿ ರಾಜ್ಯದಲ್ಲಿ ಪ್ರವಾಸ ಮಾಡಲಿವೆ. ನಾನು ಭದ್ರಾವತಿಯಲ್ಲಿ ನಡೆಯುವ ವಿಐಎಸ್ಎಲ್ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ. ಕಾರ್ಯಕ್ರಮ ಮುಗಿಸಿ ನ.5ರ ನಂತರ ಬರ ಅಧ್ಯಯನ ತಂಡದ ಜೊತೆ ನಾನುೂ ಸೇರಿಕೊಳ್ಳುವೆ ಎಂದು ತಿಳಿಸಿದರು.

ನಾಳೆ ಮೈಸೂರು ಸಂಸ್ಥಾನದ ಯದುವೀರದತ್ತ ಚಾಮರಾಜ ಒಡೆಯರ್ ಅವರು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಳಿಕ ಅವರು ನಮ್ಮ ಮನೆಗೆ ವಿಶೇಷ ಔತಣಕ್ಕೆ ಬರುವ ಸಂಭವವಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ನಮ್ಮ ಪಕ್ಷದ ವತಿಯಿಂದ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ ಬಿಎಸ್​ವೈ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೆಹಲಿ ಭೇಟಿ ವಿಚಾರ ಕೇಳಿದಾಗ, ಈಶ್ವರಪ್ಪ ಸೇರಿದಂತೆ ಇತರರನ್ನು ಹೈಕಮಾಂಡ್ ಸುಮ್ಮನೆ ಕರೆದಿದ್ದಾರೆ. ಅವರ ಭೇಟಿಗೆ ಅಂತಹ ವಿಶೇಷತೆ ಏನೂ ಇಲ್ಲ ಎಂದು ಉತ್ತರಿಸಿದರು.

ಇದನ್ನೂ ಮುನ್ನ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬೇಕಾದ ಅನುಕೂಲ ಪಡೆಯುವುದು ಮುಖ್ಯಮಂತ್ರಿಗಳ ಕರ್ತವ್ಯ. ಆದರೆ ಅದನ್ನು ಮಾಡದೆ ಬರ ಪ್ರವಾಸದ ಬದಲು ಕೇಂದ್ರಕ್ಕೆ ನಿಯೋಗ ಹೋಗುವುದು ಒಳಿತು ಎಂದು ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಗಳಿಗೂ ಜವಾಬ್ದಾರಿ ಇದ್ದು, ದೆಹಲಿಗೆ ಹೋಗಿ ಎರಡು ದಿನ ಕುಳಿತು ಪ್ರಧಾನಿ ಅವರನ್ನು ಭೇಟಿ ಮಾಡುವ ಬದಲು ಪ್ರತಿನಿತ್ಯ ಗೌರವ ಕೊಡದೇ ಹಗುರವಾಗಿ ಮಾತನಾಡಿಕೊಂಡು ತಿರುಗಾಡುತ್ತಿದ್ದರೆ. ಇವರಿಗೆ ಯಾರು ಗೌರವ ಕೊಡುತ್ತಾರೆ?. ಇನ್ನಾದರೂ ರಾಜ್ಯದ ಹಿತದೃಷ್ಟಿಯಿಂದ ಗೌರವದಿಂದ ನಡೆದುಕೊಳ್ಳಲಿ, ಪ್ರಧಾನಿಗಳ ಭೇಟಿ ಮಾಡಿ ಬೇಕಾದ ಅನುಕೂಲ ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಿ, ಅದಕ್ಕೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.

ಐದು ವರ್ಷ ನಮ್ಮದೇ ಸರ್ಕಾರ ಇರಲಿದೆ, ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೂ ನನಗೂ ಸಂಬಂಧ ಇಲ್ಲ, ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ:ರಾಜ್ಯದ ಜನರಿಗೆ ಈ ಸರ್ಕಾರ ಬೇಡವಾಗಿದೆ, ಉರುಳಿಸುವ ಕೆಲಸವನ್ನೇಕೆ ಬಿಜೆಪಿ ಮಾಡಬಾರದು?: ಕೆ.ಎಸ್.ಈಶ್ವರಪ್ಪ

Last Updated : Nov 3, 2023, 1:18 PM IST

ABOUT THE AUTHOR

...view details