ಕರ್ನಾಟಕ

karnataka

ETV Bharat / state

ಬಿಎಸ್​ವೈ ಕಟ್ಟಿಹಾಕಲು ಮುಖ್ಯಮಂತ್ರಿ ಕುಮಾರಸ್ವಾಮಿ ರಣತಂತ್ರ? - news kannada

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶಿವಮೊಗ್ಗದಲ್ಲಿ ವಾಸ್ತವ್ಯ ಹೂಡಿದ್ದರು. ಈ ಮೂಲಕ ಪ್ರತಿಪಕ್ಷದ ನಾಯಕ ಯಡಿಯೂರಪ್ಪನವರನ್ನು ಸೋಲಿಸಲು‌ ರಣತಂತ್ರ ರೂಪಿಸಿದ್ರಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಹರಕೆರೆಯ ಜಗದೀಶ್​ ಎಂಬುವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನಕ್ಕೆ‌ ತೆರಳುತ್ತಿರುವುದು

By

Published : Apr 22, 2019, 10:49 AM IST

ಶಿವಮೊಗ್ಗ:ನಗರದ ಹೊರವಲಯದ ಹರಕೆರೆಯ ಜಗದೀಶ್​ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಕುಮಾರಸ್ವಾಮಿ ನಿನ್ನೆ ಸಂಜೆ ಬೈಂದೂರು ಮೂಲಕ ಹಾಸನಕ್ಕೆ‌ ತೆರಳಿದರು.ಇದಕ್ಕೂ ಮುನ್ನ ಮನೆಯಿಂದ ಹೊರ ಬರುತ್ತಲೇ ಮಾಧ್ಯಮದವರನ್ನು ಕಂಡು ಏನೂ ಪ್ರತಿಕ್ರಿಯಿಸದೇ ತಮ್ಮ ಕಾರು ಹತ್ತಿ ಸಾಗಿದರು.

ಹರಕೆರೆಯ ಜಗದೀಶ್​ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಕುಮಾರಸ್ವಾಮಿ ಹಾಸನಕ್ಕೆ‌ ತೆರಳುತ್ತಿರುವುದು

ಮೊನ್ನೆ ಸಂಜೆ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು, ಅಂದು ರಾತ್ರಿಯಿಡೀ ಜಗದೀಶ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಸಭೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಕುಮಾರಸ್ವಾಮಿ ಬೆಳಗ್ಗೆಯಿಂದ ಸಂಜೆವರೆಗೂ ಮನೆಯಿಂದ ಹೊರ ಬಾರದೇ ಅಲ್ಲಿಯೇ ಕುಳಿತು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಜಿಲ್ಲೆಯಲ್ಲಿ ಹೇಗೆ ಕಟ್ಟಿ ಹಾಕುವುದು ಎಂಬುದರ ಬಗ್ಗೆ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು ಎನ್ನಲಾಗ್ತಿದೆ.

ABOUT THE AUTHOR

...view details