ಶಿವಮೊಗ್ಗ: ಐಟಿ ಇಲಾಖೆಯವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮನೆಗಳ ಮೇಲೆ ದಾಳಿ ನಡೆಸುವುದು ಮಾತ್ರ ಗೊತ್ತು, ಅವರಿಗೆ ಬಿಜೆಪಿಯವರು ಕಾಣಿಸುವುದಿಲ್ಲವೇ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬಿಜೆಪಿಗರು ಭಿಕ್ಷೆ ಬೇಡಿ ಚುನಾವಣೆ ನಡೆಸ್ತಾರಾ: ಸಿಎಂ ಪ್ರಶ್ನೆ - ಕಾಂಗ್ರೆಸ್
ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ ಆತ್ಮಾನಂದ ಅವರ ಮನೆ ಮೇಲಿನ ಐಟಿ ದಾಳಿ ಖಂಡಿಸಿದ ಸಿಎಂ ಕುಮಾರಸ್ವಾಮಿ. ಐಟಿ ಅವರಿಗೆ ಬಿಜೆಪಿಗರು ಕಾಣಿಸುವುದಿಲ್ಲವೇ, ಅವರೇನು ಭಿಕ್ಷೆ ಬೇಡಿ ಚುನಾವಣೆ ನಡೆಸುತ್ತಾರಾ - ಸಿಎಂ ಪ್ರಶ್ನೆ
ಸಿಎಂ ಕುಮಾರಸ್ವಾಮಿ
ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡ ಆತ್ಮಾನಂದರವರ ಮನೆ ಮೇಲೆ ನಡೆದ ಐಟಿ ದಾಳಿಯನ್ನು ಖಂಡಿಸಿದ ಸಿಎಂ ಕುಮಾರಸ್ವಾಮಿ, ಐಟಿ ವಿರುದ್ದ ಕಿಡಿಕಾರಿದ್ದಾರೆ.
ನಾವು ಹಣ ಇಟ್ಟುಕೊಂಡು ಚುನಾವಣೆ ನಡೆಸುತ್ತೇವೆ. ಬಿಜೆಪಿಯವರು ಭಿಕ್ಷೆ ಬೇಡಿ ಚುನಾವಣೆ ನಡೆಸುತ್ತಾರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಐಟಿ ದಾಳಿಗೆ ಎರಡು ಪಕ್ಷಗಳು (ಕಾಂಗ್ರೆಸ್-ಜೆಡಿಎಸ್) ಹೆದರುವ ಪ್ರಶ್ನೆಯೇ ಇಲ್ಲ ಎಂದರು.