ಕರ್ನಾಟಕ

karnataka

By

Published : Sep 28, 2021, 7:23 AM IST

ETV Bharat / state

ಶಾಲಾಭಿವೃದ್ಧಿಗೆ ಪಿಎಂ, ಸಿಎಂಗೆ ಪತ್ರ.. ವಿದ್ಯಾರ್ಥಿ ಮನವಿಗೆ ಸ್ಪಂದಿಸಿದ ಸರ್ಕಾರ: ಶಾಲೆಗೆ ಬಿಇಒ ಭೇಟಿ

ಶಾಲಾಭಿವೃದ್ದಿಗೆ ಆಗ್ರಹಿಸಿ ಪಿಎಂ, ಸಿಎಂಗೆ ಪತ್ರ ಬರೆದಿದ್ದ ವಿದ್ಯಾರ್ಥಿ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಶಾಲೆಗೆ ಬಿಇಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲೆಗೆ ಬಿಇಒ ಭೇಟಿ
ಶಾಲೆಗೆ ಬಿಇಒ ಭೇಟಿ

ಶಿವಮೊಗ್ಗ: ತಾನು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಯೊಬ್ಬ ಜಿಲ್ಲಾಧಿಕಾರಿ ಮೂಲಕ ಪಿಎಂ, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದ.

ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಶಾಲೆಯ ವಿದ್ಯಾರ್ಥಿ, ಆರನೇ ತರಗತಿ ಓದುತ್ತಿರುವ ಆರ್​.ಜಿ.ಉದಯ್​ ಕುಮಾರ್​​ ಮನವಿಗೆ ಸರ್ಕಾರ ಸ್ಪಂದಿಸಿದೆ. ಈ ಹಿನ್ನೆಲೆ, ಶಾಲೆಗೆ ಬಿಇಒ ನಾಗರಾಜ್​ ಭೇಟಿ ನೀಡಿ, ಪರಿಶೀಲಿಸಿದ್ದು, ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ.

ವಿದ್ಯಾರ್ಥಿ ಮನವಿಗೆ ಸ್ಪಂದಿಸಿದ ಸರ್ಕಾರ: ಶಾಲೆಗೆ ಬಿಇಒ ಭೇಟಿ

ಶಾಲೆಗೆ ಭೇಟಿ ನೀಡಿದ್ದ ಬಿಇಒ ನಾಗರಾಜ ಅವರು 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ, ಗಣಿತ ವಿಷಯದ ಕುರಿತಂತೆ ಪಾಠ ಮಾಡಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿ, ಅವರ ಕಲಿಕೆಯ ಗುಣಮಟ್ಟ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಗಾಣಿಗರ್, ಶಾಲೆಯ ಶಿಕ್ಷಕರಾದ ಗಣೇಶ್, ರಾಜಪ್ಪ, ಗೀತಾ, ಬಸಮ್ಮ ಉಪಸ್ಥಿತರಿದ್ದರು. ಕೆಲ ದಿನಗಳ ಹಿಂದೆ ವಿದ್ಯಾರ್ಥಿಯು ಪ್ರಧಾನಿ, ಸಿಎಂಗೆ ಪತ್ರ ಬರೆದಿದ್ದು ಅದರಲ್ಲಿ, ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ಇದೆ.

ಇಲ್ಲಿ ಹೆಚ್ಚಾಗಿ ಬಡ, ಕೂಲಿ ಕಾರ್ಮಿಕ, ಮಧ್ಯಮ ವರ್ಗಕ್ಕೆ ಸೇರಿದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಶಾಲೆಯಲ್ಲಿ ಮೂಲ ಸೌಕರ್ಯ ಕೊರತೆ ಇದೆ ಎಂದು ಸಮಸ್ಯೆಗಳನ್ನು ಉಲ್ಲೇಖಿಸಿದ್ದ.

ಇದನ್ನೂ ಓದಿ: ಶಾಲೆ ಅಭಿವೃದ್ಧಿಗೆ ಡಿಸಿ ಮೂಲಕ ಪಿಎಂ,ಸಿಎಂ,ಶಿಕ್ಷಣ ಸಚಿವರಿಗೆ ಮನವಿ ಮಾಡಿದ ವಿದ್ಯಾರ್ಥಿ

ಶಾಲಾ ಆವರಣದಲ್ಲಿ ಆಟದ ಮೈದಾನವಿಲ್ಲ. ಇದರಿಂದ ಆಟೋಟ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ. 7ನೇ ತರಗತಿಯವರೆಗಿದ್ದರೂ ಕೇವಲ ಮೂರು ಕೊಠಡಿಗಳಿವೆ. ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ ಸೇರಿದಂತೆ ಸ್ಮಾರ್ಟ್​ಕ್ಲಾಸ್ ವ್ಯವಸ್ಥೆಯಿಲ್ಲ. ಇದರಿಂದ ಆಧುನಿಕ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಕಲಿಕೆಯಲ್ಲಿ ಹಿಂದುಳಿಯುವಂತಾಗಿದೆ ಎಂದು ಮನವಿಯಲ್ಲಿ ಹೇಳಿದ್ದ.

ABOUT THE AUTHOR

...view details