ಕರ್ನಾಟಕ

karnataka

ETV Bharat / state

ವರ್ಷ ಕಳೆದ್ರೂ ಸಿಗದ ಬೆಳೆ ವಿಮೆ ಪರಿಹಾರ.. ಸಿಎಂ ತವರು ಕ್ಷೇತ್ರದಲ್ಲಿ ರೈತರಿಂದ ಪ್ರತಿಭಟನೆ.. - ಬೆಳೆ ವಿಮಾ ಹಾಗೂ ನೆರೆ ಪರಿಹಾರ

ಬೆಳೆ ವಿಮಾ ಹಾಗೂ ನೆರೆ ಪರಿಹಾರ ವಿತರಣೆ ಮಾಡದ ಅಧಿಕಾರಿಗಳ ವಿರುದ್ಧ ಶಿವಮೊಗ್ಗದಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ

By

Published : Sep 20, 2019, 9:57 AM IST

ಶಿವಮೊಗ್ಗ:ಬೆಳೆ ವಿಮಾ ಹಾಗೂ ನೆರೆ ಪರಿಹಾರ ವಿತರಣೆಗೆ ಆಗ್ರಹಿಸಿ ಶಿಕಾರಿಪುರ ತಾಲೂಕು ಶಿರಾಳಕೊಪ್ಪದ ರೈತ ಸಂಘ ನಾಡ‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.

ಕಳೆದ ಹಿಂಗಾರು ಬೆಳೆಯ ಬೆಳೆ ವಿಮೆಯನ್ನು ವಿತರಣೆ ಮಾಡಬೇಕಿದ್ದ ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡಿವೆ. ವಿಮಾ ಕಂಪನಿಯ ಜೊತೆ ಸೇರಿ ಅಧಿಕಾರಿಗಳು ಕೂಡ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನೊಂದೆಡೆ ನೆರೆ ಪರಿಹಾರ ವಿತರಣೆ ಮಾಡುವಲ್ಲಿ ಕೂಡ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

ಬೆಳೆ ವಿಮೆ ವಿತರಿಸದ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ..

ಮಳೆಯಿಂದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ರೈತರ ನೆರವಿಗೆ ಬರಬೇಕಾದ ಸರ್ಕಾರ ಕೇವಲ ಘೋಷಣೆ ಮಾಡಿ ಕೈಕಟ್ಟಿ ಕುಳಿತಿರುವುದು ಸರಿಯಲ್ಲ. ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು ಎಂದು ತಹಶೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು.

ABOUT THE AUTHOR

...view details