ಶಿವಮೊಗ್ಗ:ಕೊರೊನಾ ನಿಯಂತ್ರಿಸುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರ ಲಾಕ್ಡೌನ್ ಸಡಿಲಿಸಿದೆ ಎಂದು ಜನರು ಅನಗತ್ಯವಾಗಿ ಓಡಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು.
ಅನಗತ್ಯವಾಗಿ ಓಡಾಡಿದರೆ ಕಾನೂನು ಕ್ರಮ ನಿಶ್ಚಿತ: ಈಶ್ವರಪ್ಪ ಎಚ್ಚರಿಕೆ - Shimoga District
ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಶಿವಮೊಗ್ಗದ ಜನತೆ ಇಷ್ಟು ದಿನ ಸಹಕಾರ ನೀಡಿದಂತೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ. ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಲಾಕ್ಡೌನ್ ಸಡಿಲಿಕೆ ಎಂದು ಯಾರು ಓಡಾಡಬೇಡಿ: ಜನರಲ್ಲಿ ಈಶ್ವರಪ್ಪ ಮನವಿ
ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಶಿವಮೊಗ್ಗದ ಜನತೆ ಇಷ್ಟು ದಿನ ಸಹಕಾರ ನೀಡಿದಂತೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ. ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಯಾರು ಸಹ ಅಂಗಡಿ ಮುಗ್ಗಟ್ಟು ತೆರೆದು, ಸಭೆ ಸಮಾರಂಭಗಳನ್ನು ಆಯೋಜಿಸಬೇಡಿ ಎಂದರು.
ಸರ್ಕಾರ ತುಂಬಾ ಗಂಭೀರವಾಗಿ ಈ ವಿಷಯವನ್ನು ತೆಗೆದುಕೊಂಡಿದೆ. ಯಾರಾದರೂ ಅನಗತ್ಯವಾಗಿ ಓಡಾಡಿದರೇ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.