ಕರ್ನಾಟಕ

karnataka

ETV Bharat / state

ನೂತನ ಸಚಿವರಲ್ಲಿ ಖಾತೆ ಹಂಚಿಕೆ ಕುರಿತು ಯಾವುದೇ ಅಸಮಾಧಾನವಿಲ್ಲ: ಡಾ.ಅಶ್ವಥ್ ನಾರಾಯಣ್ - ಡಿಸಿಎಂ ಡಾ.ಅಶ್ವಥ್ ನಾರಾಯಣ್

ಯಾರಿಗೆ ಯಾವ ಖಾತೆ ನೀಡಬೇಕು ಅನ್ನೋದು ಸಿಎಂಗೆ ಚೆನ್ನಾಗಿ ತಿಳಿದಿದೆ. ಎಲ್ಲರಿಗೂ ಸಂಪೂರ್ಣವಾಗಿ ತೃಪ್ತಿಕರವಾಗುವಂತೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿದರು.

DCM Dr. Ashwath Narayan
ಡಿಸಿಎಂ ಡಾ.ಅಶ್ವಥ್ ನಾರಾಯಣ್

By

Published : Feb 13, 2020, 1:22 PM IST

ಶಿವಮೊಗ್ಗ: ನೂತನವಾಗಿ ಸಂಪುಟ ಸೇರಿರುವ ಸಚಿವರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿರುವ ಸಿಎಂ ಅಸಮಾಧಾನ ಶಮನ ಮಾಡಿದ್ದಾರೆ. ಹಾಗಾಗಿ ಈಗ ಯಾರಿಗೂ ಸಹ ಖಾತೆಯ ಬಗ್ಗೆ ಕ್ಯಾತೆ ಇಲ್ಲ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿದರು.

ನೂತನ ಸಚಿವರಲ್ಲಿ ಖಾತೆ ಹಂಚಿಕೆ ಕುರಿತು ಯಾವುದೇ ಅಸಮಧಾನವಿಲ್ಲ: ಡಿಸಿಎಂ ಡಾ. ಅಶ್ವಥ್ ನಾರಾಯಣ್

ನಗರದಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಅವರು, ಯಾರಿಗೆ ಯಾವ ಖಾತೆ ನೀಡಬೇಕು ಅಂತ ಸಿಎಂಗೆ ಚೆನ್ನಾಗಿ ತಿಳಿದಿದೆ. ಎಲ್ಲರಿಗೂ ಸಂಪೂರ್ಣ ತೃಪ್ತಿಕರವಾಗುವಂತೆ ಅವರು ಖಾತೆ ಹಂಚಿಕೆ ಕಾರ್ಯವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದರು.

ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇರುತ್ತದೆ. ಈಗ ಸಚಿವರಾಗಿರುವವರ ಬಗ್ಗೆ ಗಮನಹರಿಸೋಣ. ಮುಖ್ಯಮಂತ್ರಿಗಳು ಸೂಕ್ತ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಸೋತವರ ಕುರಿತು ಏನು ನಡೆಯುತ್ತದೆ ಎಂದು ಮುಂದೆ ತಿಳಿಯುತ್ತದೆ ಎನ್ನುವ ಮೂಲಕ ಮಾಧ್ಯಮದವರ ಪ್ರಶ್ನೆಗಳಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.

ಉಮೇಶ್ ಕತ್ತಿಯವರಿಗೆ ಸಚಿವ ಸ್ಥಾನದ ಕುರಿತ ಪ್ರಶ್ನೆಗೆ, ಈ ಬಗ್ಗೆ ಸಿಎಂ ನೋಡಿಕೊಳ್ಳುತ್ತಾರೆ ಎಂದಷ್ಟೇ ಹೇಳಿದರು. ನಮಗೆ ನಮ್ಮದೇ ಆದ ಲಿಮಿಟೇಷನ್ಸ್ ಇದೆ. ನಾವು ನಮ್ಮ ಪರಿಧಿಯಲ್ಲೇ ನಡೆಯಬೇಕು ಎಂದರು.

ABOUT THE AUTHOR

...view details