ಕರ್ನಾಟಕ

karnataka

ETV Bharat / state

ಅಕ್ರಮ ಜಾನುವಾರು ಸಾಗಾಟ: ಬಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ - bajrang dal

ಅಕ್ರಮ ಗೋ ಸಾಗಾಣಿಕೆ ಮಾಡುತ್ತಿದ್ದಾಗ ಹಿಡಿದ ಬಜರಂಗದಳ ಕಾರ್ಯಕರ್ತರು ಜಾನುವಾರುಗಳನ್ನು ಹೊಸನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಭಜರಂಗದಳ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ
Protection of cows by Bajrang Dal activists

By

Published : Oct 2, 2022, 8:57 PM IST

ಶಿವಮೊಗ್ಗ: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಬಜರಂಗದಳದ ಕಾರ್ಯಕರ್ತರು ದಾಳಿ‌ ನಡೆಸಿ, 7 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ಹೊಸನಗರ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ ನಡೆದಿದೆ. ಇಂದು ಹೊಸನಗರದಿಂದ ಶಿರಾಳಕೊಪ್ಪದ ಕಡೆ ಹೊರಟಿದ್ದ ವಾಹನವನ್ನು ಅನುಮಾನಗೊಂಡು ತಡೆದು‌ ನೋಡಿದಾಗ ವಾಹನದಲ್ಲಿ 6 ಹೋರಿ ಹಾಗೂ ಒಂದು ಕರು ಕಂಡುಬಂದಿದೆ.

ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬಜರಂಗದಳ‌ ಕಾರ್ಯಕರ್ತರು ಕೂಡಲೇ ಹಿಂಬಾಲಿಸಿ ಹೋಗಿ ಹಿಡಿದಿದ್ದಾರೆ. ವಾಹನ ಹಾಗೂ ಜಾನುವಾರುಗಳನ್ನು ಹೊಸನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ :ಹಣದಾಸೆಗೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಮಾರಿದ ತಾಯಿ.. ಬಾಲಕಿಯೇ ಬಿಚ್ಚಿಟ್ಟಳು ಅಮ್ಮನ ಕೃತ್ಯ

ABOUT THE AUTHOR

...view details