ಕರ್ನಾಟಕ

karnataka

ETV Bharat / state

ಬಿಜೆಪಿಗರಿಗೆ ಭಾವುಕತೆ ಅನ್ನೋದು ಗೊತ್ತಿದ್ದಿದ್ದರೆ ನನ್ನ ಕಣ್ಣೀರು ಅರ್ಥ ಆಗುತ್ತಿತ್ತು: ಹೆಚ್​ಡಿಕೆ - news kannada

ಶಿವಮೊಗ್ಗದಲ್ಲಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ, ಅವರಿಗೆ ಭಾವುಕತೆ ಅನ್ನೋದೇ ಗೊತ್ತಿಲ್ಲ ಎಂದಿದ್ದಾರೆ. ಭಾವುಕತೆ ಬಗ್ಗೆ ಗೊತ್ತಿದ್ದಿದ್ದರೆ ನನ್ನ ಕಣ್ಣೀರಿನ ಅರ್ಥ ತಿಳಿತಿತ್ತು ಎಂದು ಹೆಚ್​ಡಿಕೆ ತಿವಿದಿದ್ದಾರೆ.

ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

By

Published : Apr 17, 2019, 6:04 PM IST

ಶಿವಮೊಗ್ಗ: ನಾನೋರ್ವ ಭಾವುಕ ಜೀವಿ, ಹಾಗಾಗಿ ಪ್ರತಿದಿನ ಕಣ್ಣೀರು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಸೊರಬದ ಆನವಟ್ಟಿಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಹೆಲಿಪ್ಯಾಡ್​​ನಲ್ಲಿ ಮಾತನಾಡಿದ ಅವರು, ನನ್ನ ಕಣ್ಣಲ್ಲಿ ವಿನಾಕಾರಣ ನೀರು ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ ಎಂದರು.

ಬಿಜೆಪಿ ನಾಯಕರಿಗೆ ತೀರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿಗೆ ಹೃದಯದಲ್ಲಿ ಭಾವುಕತೆ ಇದ್ದಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು ಎಂದು ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಇನ್ನು ಸಚಿವ ಡಿ.ಕೆ. ಶಿವಕುಮಾರ್ ಅವರು ಕನಕಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಅವರು ಬರುತ್ತೇನೆ ಅಂದ್ರು, ಆದ್ರೆ ನಾನೇ ಬೇಡ ನಿಮ್ಮ ಕಡೆ ಪ್ರಚಾರ ಮಾಡಿ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿ ಶಿವಮೊಗ್ಗ ಪ್ರಚಾರಕ್ಕೆ ಬರಲಿದ್ದಾರೆ ಎಂದು ಸಿಎಂ ತಿಳಿಸಿದರು.

ABOUT THE AUTHOR

...view details