ಕರ್ನಾಟಕ

karnataka

ETV Bharat / state

ನಮ್ಮೂರಿಗೆ ಉರಿನೂ ಬೇಡ, ನಂಜು ಬೇಡ: ಆಯನೂರು ಮಂಜುನಾಥ್ - ಆಯನೂರು ಮಂಜುನಾಥ್

ನಾನಂತೂ ಶಿವಮೊಗ್ಗದ ಶಾಂತಿಯನ್ನು ಬಯಸುವವನು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್​ ಅವರು ಹೇಳಿದ್ದಾರೆ.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

By

Published : Mar 21, 2023, 6:33 PM IST

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

ಶಿವಮೊಗ್ಗ : ನಮ್ಮೂರಲ್ಲಿ ಉರಿನೂ ಬೇಡ, ನಂಜು ಕೂಡ ಬೇಡ. ಶಿವಮೊಗ್ಗ ಶಾಂತವಾಗಿರಬೇಕೆಂದು ಬಯಸುತ್ತೇನೆ. ಅಲ್ಲಿರುವ ಉರಿಗೌಡ ಹಾಗೂ ನಂಜೇಗೌಡ ಅವರ ಬಗ್ಗೆ ನಾನು ಉಲ್ಲೇಖ ಮಾಡುತ್ತಿಲ್ಲ. ಆ ಉರಿ -ನಂಜು ನಮ್ಮೂರಿಗೆ ಬರದಿರಲಿ ಎಂಬುದಷ್ಟೇ ನನ್ನ ಹಾರೈಕೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ತಮ್ಮ ಪುತ್ರನಿಗೆ ಟಿಕೆಟ್ ಕೇಳಿದ್ದಾರೆ. ಆದರೆ, ಅವನಿನ್ನು ಸಣ್ಣವನಿದ್ದಾನೆ. ಅವನಿಗೆ ಟಿಕೆಟ್ ಕೊಡುವ ಬದಲು, ನಾವು ಇಲ್ಲಿ ರೇಸ್​ನಲ್ಲಿದ್ದೇವೆ. ನಮಗೆ ಟಿಕೆಟ್ ಕೊಡಿ ಅಂತಾ ನಾನು ಕೇಳಿದ್ದೇನೆ ಹೊರತು ಬೇರೇನೂ ಇಲ್ಲ. ನನಗೊಂದು ಅವಕಾಶ ಕೊಡಿ, ಬಳಿಕ ಅವರ ಮಗನಿಗೆ ನಂತರ ಕೊಡಿ ಎಂದು ಹೇಳಿದ್ದೇನೆ. ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ನನಗಿದೆ. ಕಲ್ಪನೆಗಳಿಗೆ ಕಡಿವಾಣ ಕನಸು ಕಾಣುವವರೇ ಹಾಕಿಕೊಳ್ಳಬೇಕು. ನಾನು ಸಮಸ್ಯೆ ವಿರುದ್ಧ ಎಂದಿಗೂ ಧ್ವನಿ ಎತ್ತಿದ್ದೇನೆ. ಹಾಗೆಯೇ ಇಲ್ಲಿಯೂ ಕೂಡ ಟಿಕೆಟ್ ಕೇಳಿದ್ದೇನೆ. ನಾನು ಸ್ಪರ್ಧಿಸಲು ರೆಡಿ ಇದ್ದೇನೆ, ನನಗೆ ಟಿಕೆಟ್ ಬೇಕೇ ಬೇಕು ಎಂದು ಕೇಳಿದ್ದೇನೆ. ನನ್ನ ಪರವಾಗಿ ಪಕ್ಷದ ಅನೇಕ ಮುಖಂಡರು ಕೂಡ ಟಿಕೆಟ್ ಕೇಳಿದ್ದಾರೆ. ನಾನು ಟಿಕೆಟ್ ಬೇಕೆಂದು ಹಠ ಮಾಡಿ ಕೇಳುತ್ತಿದ್ದೇನೆ. ಇನ್ನು ಹಠ ಮಾಡುತ್ತೇನೆ. ಹಠ ಮಾಡುತ್ತೇನೆ ಎಂದರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

ಕಲ್ಪನೆಗಳಿಗೆ ಕಡಿವಾಣ ಯಾರು ಹಾಕಬೇಕು? ಕನಸು ಕಂಡವರು ಹಾಕಬೇಕು. ನಿಷ್ಠುರದ ಮಾತುಗಳನ್ನು ಆಡಿದ ಕೂಡಲೇ ಅಲ್ಲಿಗೆ ಹೋಗ್ತಾರೆ, ಇಲ್ಲಿಗೆ ಹೋಗ್ತಾರೆ ಅಂದ್ರೆ ಏನು ಹೇಳಲಿ ನಾನು. ಸದನದಲ್ಲಿ ನಿಂತು ನಿಷ್ಠುರವಾಗಿ ಮಾತನಾಡುತ್ತೇನೆ. ನನ್ನ ಪಕ್ಷ ಸರಿ ಮಾಡಬೇಕೆಂಬ ಕಾರಣಕ್ಕಾಗಿ. ನನ್ನ ಸರ್ಕಾರವಿದ್ದಾಗ ನೈಜವಾದ ಬಡಿದಾಟ ಮಾಡುತ್ತೇವೆ. ಅದು ಸರ್ಕಾರದ ವಿರುದ್ಧವಲ್ಲ, ಅದು ನೈಜ ಸಮಸ್ಯೆಯ ವಿರುದ್ಧ ಎಂದರು. ನನ್ನ ಸರ್ಕಾರದಿಂದ ಉತ್ತಮ ಕೆಲಸವಾಗಲಿ ಎಂಬ ಗಾಢ ಇಚ್ಛೆಯಿಂದ ಈ ಮಾತನ್ನು ನಾನು ಹೇಳುತ್ತೇನೆ. ಅದಕ್ಕೆ ಬೇರೆ ಯಾರೋ ಬೇರೆ ಅರ್ಥ ಕಲ್ಪಿಸಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದರು.

ಬಡವರ ಪರವಾಗಿ ಕೆಲಸ ಮಾಡಲು ರಾಜಕಾರಣವಿದೆ -ಆಯನೂರು: ಕೆ ಎಸ್ ಈಶ್ವರಪ್ಪ ಹಾಗೂ ಬಿಜೆಪಿ ನಡುವೆ ನಾನು ಉರಿಗೌಡನೂ ಅಲ್ಲ, ನಂಜೇಗೌಡನೂ ಅಲ್ಲ. ನಾನು ಆಯನೂರು ಮಂಜುನಾಥ್​. ನಾನು ಈ ಜನರ ಪ್ರತಿನಿಧಿಯಾಗಿ ಬಂದಿದ್ದೇನೆ. ನಾನು ಈ ಊರಿನ ಆಟೋದವರ, ಈ ಊರಿನ ಅಡಿಕೆ ಮಂಡಿ, ಕೂಲಿಕಾರರ, ಕಟ್ಟಡ ಕಾರ್ಮಿಕರ ಯಾರ್ಯಾರು ತಮ್ಮ ಮೈಯನ್ನು ರಕ್ತವನ್ನು ಬೆವರು ಮಾಡಿ ಬದುಕುತ್ತಾರೋ ಅಂತವರ ಪ್ರತಿನಿಧಿಯಾಗಿ ಬಂದೆ ನಾನು. ಬಡವರ ಪರವಾಗಿ ಅಶಕ್ತರ ಸಲುವಾಗಿ ಕೆಲಸ ಮಾಡಲು ರಾಜಕಾರಣವಿದೆಯೇ ಹೊರತು, ಯಾರೋ ಅನುಕೂಲಸ್ಥರಿಗೆ ಅನುಕೂಲ ಮಾಡಿಕೊಡುವುದಕ್ಕೆ ಇಲ್ಲ. ಹಾಗಾಗಿ ಎಲ್ಲಾ ಪಕ್ಷಗಳ ಪ್ರಣಾಳಿಕೆಯಲ್ಲಿ ಬಡವರ ಬಗ್ಗೆಯೇ ಮಾತನಾಡುತ್ತೇವೆ ಎಂದು ತಿಳಿಸಿದರು.

ಯಾರ ಪ್ರಚೋದನೆಗೂ ಉದ್ರೇಕಕ್ಕೂ ಒಳಗಾಗಬೇಡಿ-ಮಂಜುನಾಥ್​: ಅದೃಷ್ಟವಶಾತ್​ ನಾನು ಕಾಲೇಜು ದಿನ ಮುಗಿದಂದಿನಿಂದ ಬಡವರ ಪ್ರತಿನಿಧಿಯಾಗಿಯೇ ಉಳಿದಿದ್ದೇನೆ. ನಾನಂತೂ ಶಾಂತಿಯನ್ನು ಬಯಸುವವನು, ಬೇರೆ ಯಾರೋ ಉರಿಗೌಡ ಹಾಗೂ ನಂಜೇಗೌಡರನ್ನು ಸೃಷ್ಠಿ ಮಾಡುವುದು ಒಳ್ಳೆಯದು. ಯಾರು ಉರಿಗೌಡನೋ, ಯಾರು ನಂಜೇಗೌಡನೋ ನನಗೆ ಗೊತ್ತಿಲ್ಲ. ಯಾರು ನನ್ನ ಮಾತಿಗೆ ಉರಿಯುತ್ತಾರೋ ಅವರಿಗೆ ಉರಿಗೌಡ ಎನ್ನುತ್ತಾರೆ. ಯಾರ ಬಾಯಲ್ಲಿ ನಂಜು ಬರುತ್ತೋ ಅವರನ್ನು ನಂಜೇಗೌಡ ಎನ್ನುತ್ತಾರೆ. ನನಗೆ ಕಾರ್ಮಿಕರ ಸಪೋರ್ಟ್ ಇದೆ. ಪಕ್ಷ ನನ್ನ ಪರವಾಗಿದೆ ಎಂದರು.

ಶಿವಮೊಗ್ಗ ನಗರದ ಎಲ್ಲಾ‌ ಕಡೆ ಪ್ಲೆಕ್ಸ್ ಹಾಕಿರುವ ಕುರಿತು ಸ್ಪಷ್ಟನೆ ನೀಡಿದ ಆಯನೂರು ಮಂಜುನಾಥ್, ನಾನು ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯ ಕೋರಿ ಫ್ಲೆಕ್ಸ್ ಗಳನ್ನು ಹಾಕಿದ್ದೇನೆ. ಸಹಜವಾಗಿಯೇ ನಾನು ಶುಭಾಶಯಗಳನ್ನು ಕೋರಿದ್ದೇನೆ. ಯಾರು ಪ್ರಚೋದಿಸುತ್ತಾರೋ, ಯಾರೂ ಉದ್ರೇಕಿಸುತ್ತಾರೋ ಅವರ ಸ್ವಂತ ಹಿತಾಸಕ್ತಿಗಳಿರಬಹುದು. ಯಾರ ಪ್ರಚೋದನೆಗೂ, ಉದ್ರೇಕಕ್ಕೂ ನೀವು ಒಳಗಾಗಬೇಡಿ ಎಂದರು.

ಇದನ್ನೂ ಓದಿ :ಅಧಿಕಾರಕ್ಕಾಗಿ ಕಾಂಗ್ರೆಸ್​ನವರು ತಿರುಕನ ಕನಸು ಕಾಣುತ್ತಿದ್ದಾರೆ: ಬಿ ಎಸ್​ ಯಡಿಯೂರಪ್ಪ

ABOUT THE AUTHOR

...view details