ಶಿವಮೊಗ್ಗ: ಮನ್ಸೂರ್ ಜೀವಂತವಾಗಿ ಉಳಿಯಲ್ಲ, ಐಎಂಎ ಅನ್ನು ಯಾರು ಲೂಟಿ ಮಾಡಿದ್ದರೂ ಅವರೇ ಮನ್ಸೂರ್ ಅವರನ್ನ ಕೊಲೆ ಮಾಡಿ ಬಿಡುತ್ತಾರೆ ಎಂಬ ಆಂತಕವನ್ನು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.
ಮನ್ಸೂರ್ ದೇಶ ಬಿಡಲು ಮೈತ್ರಿ ಸರ್ಕಾರವೇ ಕಾರಣ: ಈಶ್ವರಪ್ಪ ವಾಗ್ದಾಳಿ - kannadanews
ಐಎಂಎ ಜ್ಯೂವೆಲ್ಸ್ ನ ಮಾಲೀಕ ಮನ್ಸೂರ್ ದೇಶ ಬಿಟ್ಟು ಹೋಗಲು ಮೈತ್ರಿ ಸರ್ಕಾರವೇ ಕಾರಣ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಐಎಂಎ ನಲ್ಲಿ ಎಷ್ಟು ಲೂಟಿಯಾಗಿದೆ ಎಂದು ಸರ್ಕಾರ ಹೇಳಲು ತಯಾರಿಲ್ಲ. ಕೂಲಿ ಮಾಡಿದ ಸಾಕಷ್ಟು ಮುಸ್ಲಿಮರು ಇದರಲ್ಲಿ ಹಣ ತೊಡಗಿಸಿದ್ದರು. ಮುಸ್ಲಿಮರ ಉದ್ಧಾರಕರು ಅಂತ ಹೇಳುವ ಮೈತ್ರಿ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಿಡಿ ಕಾರಿದರು .
ಮೈತ್ರಿ ಸರ್ಕಾರ ಯಾಕೆ ಮನ್ಸೂರ್ ನನ್ನು ಅರೆಸ್ಟ್ ಮಾಡಿಲ್ಲ, ಎಸ್ಐಟಿಯಿಂದ ಮನ್ಸೂರ್ ನನ್ನು ಹಿಡಿದು ನ್ಯಾಯ ಕೊಡಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಮನ್ಸೂರ್ಗೆ ರಕ್ಷಣೆ ನೀಡಿ ಎಂದು ಸರ್ಕಾರವನ್ನು ಕೇಳುತ್ತಿರುವುದು ಎಂದರು. ಐಎಂಎನಲ್ಲಿ ಮೈತ್ರಿ ಸರ್ಕಾರದ ಅನೇಕರಿಗೆ ಕಿಕ್ ಬ್ಯಾಕ್ ಸಿಕ್ಕಿದೆ. ನಾವು ಐಎಂಎ ಪ್ರಕರಣವನ್ನು ಸಿಬಿಐಗೆ ನೀಡಿ ಅಂದ್ರು ನೀಡುತ್ತಿಲ್ಲ. ಮನ್ಸೂರ್ ಕೊಲೆಯಾದ್ರೆ, ಐಎಂಎ ಲೂಟಿ ಹೊಡೆದವರು ಉಳಿದು ಕೊಳ್ಳುತ್ತಾರೆ ಎಂದರು.