ಕರ್ನಾಟಕ

karnataka

ETV Bharat / state

ಮತ್ಸ್ಯ ಸಂಪದ ಯೋಜನೆ ಸಮರ್ಪಕ ಬಳಕೆಗೆ ಅಪರ ಜಿಲ್ಲಾಧಿಕಾರಿ ಸೂಚನೆ - Central govt fishing project

ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಲಾಭವನ್ನು ಶಿವಮೊಗ್ಗದ ಜನತೆ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಬೃಹತ್ ಜಲಾಶಯಗಳಿದ್ದು, ಒಳನಾಡು ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ತಿಳಿಸಿದರು.

Anuradha
Anuradha

By

Published : Jul 23, 2020, 10:30 AM IST

ಶಿವಮೊಗ್ಗ: ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಗರಿಷ್ಠ ಲಾಭ ಪಡೆದುಕೊಂಡು ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿಯ ಪ್ರಥಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಯೋಜನೆಯಾಗಿದ್ದು, 2020-2025 ವರೆಗಿನ ಪಂಚವಾರ್ಷಿಕ ಯೋಜನೆಯಾಗಿರುತ್ತದೆ. ಜಿಲ್ಲೆಯಲ್ಲಿ ಬೃಹತ್ ಜಲಾಶಯಗಳಿದ್ದು, ಒಳನಾಡು ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವಿದೆ.

ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಮೀನು ಮರಿ ಉತ್ಪಾದನೆ, ಹೊಸ ತಂತ್ರಜ್ಞಾನ ಅಳವಡಿಕೆ, ಮೀನು ಮಾರುಕಟ್ಟೆಗಳ ನಿರ್ಮಾಣ, ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಬೆಂಬಲ ನೀಡುವುದು, ಮೀನುಗಾರಿಕಾ ತರಬೇತಿ ನೀಡಲು ಸಾಧ್ಯವಿದೆ. ಈ ಕುರಿತು ಮೀನುಗಾರರಿಗೆ ಹೆಚ್ಚಿನ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

2020-21ನೇ ಸಾಲಿಗೆ ಒಟ್ಟು ರೂ. 3.13 ಕೋಟಿ ಯೋಜನಾ ವೆಚ್ಚದೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮೀನು ಮರಿ ಪಾಲನೆ ಪ್ರತಿ ಹೆಕ್ಟೇರ್ ವಿಸ್ತೀರ್ಣಕ್ಕೆ ರೂ. 11 ಲಕ್ಷವಿದ್ದು, ಸಾಮಾನ್ಯ ವರ್ಗದವರಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಮಹಿಳೆಯರಿಗೆ ಶೇ.60 ಸಹಾಯ ಧನವಿರುತ್ತದೆ ಎಂದು ತಿಳಿಸಿದರು.

ಮೀನು ಕೃಷಿಕೊಳ ನಿರ್ಮಾಣ, ಸಾರಯುಕ್ತ ಮಣ್ಣಿನಲ್ಲಿ ಮೀನು ಉತ್ಪಾದನಾ ಕೊಳ ನಿರ್ಮಾಣ, ಸಣ್ಣ ಮತ್ತು ಮಧ್ಯಮ ಗಾತ್ರದ ಅಲಂಕಾರಿಕ ಮೀನು ಉತ್ಪಾದನೆ ಮತ್ತು ಪಾಲನಾ ಕೇಂದ್ರ ನಿರ್ಮಾಣ, ಜಲಾಶಯಗಳಲ್ಲಿ ಕೇಜ್‍ಗಳ ಸ್ಥಾಪನೆ, ಮಂಜುಗಡ್ಡೆ ಉತ್ಪಾದನಾ ಕಾರ್ಖಾನೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ, ರೆಫ್ರಿಜರೇಟರ್ ವಾಹನ, ಇನ್ಸುಲೇಟೆಡ್ ವಾಹನ, ಮೋಟಾರ್ ಸೈಕಲ್ ಐಸ್ ಬಾಕ್ಸ್ ಖರೀದಿ, ಮೀನು ಆರೋಗ್ಯ ತಪಾಸಣಾ ಪ್ರಯೋಗಾಲಯಗಳ ಸ್ಥಾಪನೆ, ಮೊಬೈಲ್ ಕ್ಲಿನಿಕ್ ಲ್ಯಾಬ್‍ಗಳು ಹಾಗೂ ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಹಾಗೂ ಮೀನುಗಾರರ ಜೀವನೋಪಾಯ ಹಾಗೂ ಪೌಷ್ಟಿಕತೆಗೆ ಒತ್ತು ನೀಡುವುದು, ಮೀನುಗಾರರಿಗೆ ಜೀವ ವಿಮಾ ಸೌಲಭ್ಯಗಳನ್ನು ಕ್ರಿಯಾ ಯೋಜನೆಯಲ್ಲಿ ಕಲ್ಪಿಸಿರುವುದಾಗಿ ಮೀನುಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಕ್ಷರಿ ಅವರು ಇದೇ ವೇಳೆ ತಿಳಿಸಿದರು.

ABOUT THE AUTHOR

...view details