ಕರ್ನಾಟಕ

karnataka

ETV Bharat / state

ಉರಿ ಬಿಸಿಲಲ್ಲಿ ನಡೆದುಕೊಂಡು ಬಂದು ಮತದಾನ ಮಾಡಿ ಗಮನ ಸೆಳೆದ 98ರ ಅಜ್ಜಿ! - ಅಜ್ಜಿ

98 ವರ್ಷದ ಸೀತಮ್ಮಜ್ಜಿ ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೆ ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ವೋಟ್ ಮಾಡದೆ ಮನೆಯಲ್ಲೇ ಕುಳಿತು ಕಾಲ ಕಳೆಯುವ ಯುವಕರಿಗೆ ಮಾದರಿಯಾಗಿದ್ದಾರೆ.

ಮತದಾನ ಮಾಡಿದ 98 ರ ಸೀತಮ್ಮಜ್ಜಿ

By

Published : Apr 23, 2019, 6:53 PM IST

ಶಿವಮೊಗ್ಗ:ವೋಟ್ ಮಾಡಲು ಯುವ ಜನತೆ ನಿರಾಸಕ್ತಿ ತೋರುತ್ತಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬ ಅಜ್ಜಿ ಬೇಸಿಗೆಯ ಬಿಸಿಯನ್ನು ಲೆಕ್ಕಿಸದೆ ಬಂದು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

98 ವರ್ಷದ ಸೀತಮ್ಮಜ್ಜಿ ಬೇಸಿಗೆಯ ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೆ ನಡೆದುಕೊಂಡು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ವೋಟ್ ಮಾಡದೆ ಮನೆಯಲ್ಲೇ ಕುಳಿತು ಕಾಲ ಕಳೆಯುವ ಯುವಕರಿಗೆ ಮಾದರಿಯಾಗಿದ್ದಾರೆ.

ಶಿವಮೊಗ್ಗದ ಕಾಶಿಪುರ ವಾರ್ಡ್​ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 96 ಕ್ಕೆ ಬಂದು ಅಜ್ಜಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಮತದಾನ ಮಾಡಿದ 98 ರ ಸೀತಮ್ಮಜ್ಜಿ

ಇಳಿ ವಯಸ್ಸಿನ ಸೀತಮ್ಮಜ್ಜಿ ಮಾತನಾಡಿ, ಎಲ್ಲರೂ ವೋಟ್ ಮಾಡಿ ದೇಶ ಕಟ್ಟಲು ಸಹಕಾರಿ ಆಗಬೇಕು. ಮನೆಯಿಂದ ಹೊರಬಂದು ಮತ ಚಲಾಯಿಸಬೇಕೆಂದು ಕಿವಿಮಾತು ಹೇಳಿದರು.

ABOUT THE AUTHOR

...view details