ರಾಮನಗರ: ದೇಶ ಹಾಗೂ ರಾಜ್ಯದ ಅನೇಕ ಸ್ವಾಮೀಜಿಗಳೂ ಸೇರಿದಂತೆ ಕೆಲವರು ಮೀಸಲಾತಿ ಪದದ ಅರ್ಥಕ್ಕೆ ಮಸಿ ಬಳಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ರಾಮನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿಗೆ ಒಂದು ದೃಷ್ಟಿಕೋನ ಇತ್ತು. ಯಾವ ಸಮುದಾಯ ಮುಖ್ಯವಾಹಿನಿ ಬಂದಿರಲಿಲ್ಲವೋ ಅಂಥವರಿಗೆ ಮೀಸಲಾತಿ ಕೊಡಲಾಗಿತ್ತು. ಈ ಮುಖೇನ ಈಗಾಗಲೇ ದೇಶದ ಶೇ 90ರಷ್ಟು ವರ್ಗಗಳು ಮೀಸಲಾತಿಯಡಿ ಬಂದಿವೆ ಎಂದರು.
ಮೀಸಲಾತಿ ಅರ್ಥ ಕಳೆದುಕೊಳ್ತಿದೆ: ಕೇಂದ್ರ ಸಚಿವ ನಾರಾಯಣಸ್ವಾಮಿ - ಈಟಿವಿ ಭಾರತ ಕರ್ನಾಟಕ
ಮುಖ್ಯಮಂತ್ರಿಗಳಿಗೆ ಗೆರೆ ಹಾಕಿ ಮೀಸಲಾತಿ ನೀಡಬೇಕು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಪದ ಅರ್ಥ ಕಳೆದುಕೊಳ್ಳುತ್ತಿದೆ:ಕೇಂದ್ರ ಸಚಿವ ನಾರಾಯಣಸ್ವಾಮಿ
ಮುಖ್ಯಮಂತ್ರಿಗಳಿಗೆ ಗೆರೆ ಹಾಕಿ ಮೀಸಲಾತಿ ನೀಡಬೇಕು ಎನ್ನುವುದು ಸರಿಯಲ್ಲ. ಯಾರಿಗೆ ಅನ್ಯಾಯ ಆಗುತ್ತಿದೆ, ಅವರು ಮೀಸಲಾತಿ ಕೇಳಿದರೆ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೀಸಲಾತಿ ಕೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ:ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಿ ಪಿ ಯೋಗೇಶ್ವರ್ ವಾಗ್ದಾಳಿ