ರಾಮನಗರ : ಕಾಡಾನೆಗಳ ದಾಳಿಗೆ ಮಾವುಬೆಳೆ ನಾಶಗೊಂಡ ಘಟನೆ ನಡೆದಿದೆ. ತಾಲ್ಲೂಕಿನ ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದಲ್ಲಿ ನಾಲ್ಕೈದು ಆನೆಗಳ ಹಿಂಡು ದಾಳಿ ನಡೆಸಿದ್ದರಿಂದ ಗ್ರಾಮದ ಯೋಗೇಶ್, ಕಾಡೇಗೌಡ, ಚಂದ್ರೇಗೌಡ, ಅಪ್ಪಾಜಣ್ಣ, ಸತೀಶ್ ಸೇರಿದಂತೆ ಹಲವು ರೈತರ ಮಾವಿನ ಮರಗಳು, ಬೋರ್ವೆಲ್ ಪರಿಕರ ಸೇರಿದಂತೆ ಕೃಷಿಸಂಬಂಧಿ ವಸ್ತುಗಳನ್ನ ನಾಶಮಾಡಿವೆ
ಕಾಡಾನೆಗಳ ದಾಳಿಗೆ ಮಾವುಬೆಳೆ ನಾಶ... ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ - ಕಾಡಾನೆಗಳ
ಪ್ರತಿದಿನ ಕತ್ತಲಾಗುತ್ತಿದ್ದಂತೆ ದಾಂಗುಡಿ ಇಡುವ ಕಾಡಾನೆಗಳ ಹಿಂಡು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಪದೆ ಪದೆ ಆನೆಗಳ ದಾಳಿಗೆ ತತ್ತರಿಸಿರುವ ರೈತರು ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಪಾರ ಪ್ರಮಾಣದಲ್ಲಿ ಮಾವುಗಿಡಗಳನ್ನು ನಾಶ ಪಡಿಸಿರುವ ಆನೆಗಳು ಗ್ರಾಮದ ಪಕ್ಕಕ್ಕೆ ಹೊಂದಿಕೊಂಡ ಅರಣ್ಯದಲ್ಲಿವೆ. ಪ್ರತಿದಿನ ಕತ್ತಲಾಗುತ್ತಿದ್ದಂತೆ ದಾಂಗುಡಿ ಇಡುವ ಕಾಡಾನೆಗಳ ಹಿಂಡು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಪದೆ ಪದೆ ಆನೆಗಳ ದಾಳಿಗೆ ತತ್ತರಿಸಿರುವ ರೈತರು ಅರಣ್ಯಾಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪದೇ ಪದೇ ಕಾಡುಪ್ರಾಣಿಗಳು ದಾಳಿ ನಡೆಸಿ ಬೆಳೆ ಮತ್ತು ಪ್ರಾಣಿಗಳಿಗೆ ಸಂಚಕಾರ ತಂದೊಡ್ಡುತ್ತಿದ್ದರೂ ಹಾಗೂಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಮ್ಮೆ ಚರ್ಮ ಒದ್ದು ಕೂತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ರು.